
ಬೆಂಗಳೂರು: ಎಲ್ಲ ಪಕ್ಷದಲ್ಲೂ ವೈಯಕ್ತಿಕ ಭಿನ್ನಾಭಿಪ್ರಾಯ, ಮನಸ್ತಾಪ ಇರುವುದು ಕಾಮನ್. ಚುನಾವಣೆ ಹತ್ತಿರವಾಗುವಾಗ ಭಿನ್ನಾಭಿಪ್ರಾಯದಿಂದಾನೇ ಪಕ್ಷ ಬದಲಾವಣೆ ಕೂಡ ನಡೆಯಲಿದೆ. ಈಗ ಬಿಜೆಪಿಯ ಸಚಿವ ಸೋಮಣ್ಣ ವಿಚಾರ ಚರ್ಚೆಯಲ್ಲಿದೆ.

ಹಲವು ತಿಂಗಳಿನಿಂದ ಸಚಿವ ಸೋಮಣ್ಣ, ಬಿಜೆಪಿ ನಡವಳಿಕೆಗೆ ಬೇಸತ್ತಿದ್ದಾರೆ. ಅದಾಗಲೇ ಅವ್ರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆದಿದೆ ಎಂಬೆಲ್ಲಾ ವಿಚಾರ ಜೋರಾಗಿತ್ತು. ಇದರ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಮಾಧಾನ ಮಾಡುವ ಪ್ರಯತ್ನ ನಡೆಸಿದ್ದರು. ಅಸಾಮಧಾನವನ್ನು ಅಳಿಸುವ ಪ್ರಯತ್ನಕ್ಕೆ ಕಾರಣವಾಗಿತ್ತು. ಆದರ ಸಿಎಂ ಬೊಮ್ಮಾಯಿ ಅವರ ಸಂಧಾನ ಸಭೆ ಸಫಲವಾಗಿರುವುದು ಅಷ್ಟಾಗಿ ಕಾಣಿಸುತ್ತಿಲ್ಲ. ಯಾಕಂದ್ರೆ ಇಂದು ಸಚಿವ ಸೋಮಣ್ಣ ಅವರಿಗೆ ಸಂಬಂಧಪಟ್ಟಂತ ಫೋಟೋವೊಂದು ವೈರಲ್ ಆಗ್ತಾ ಇದೆ.
ಫ್ಲೈಟ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆಗೆ ವಿ ಸೋಮಣ್ಣ ಇರುವಂತ ಫೋಟೋವಿದು. ಕಾಂಗ್ರೆಸ್ ಸೇರುವ ವಿಚಾರವನ್ನು ಇಲ್ಲಿಯೇ ಚರ್ಚೆ ನಡೆಸಿದ್ರಾ ಎಂಬೆಲ್ಲಾ ಚರ್ಚೆಗಳು ಆರಂಭವಾಗಿದೆ. ಸಚಿವ ಸೋಮಣ್ಣ ಅವರು ಮಧ್ಯಾಹ್ನ ಸುದ್ದಿಗೋಷ್ಟಿ ಕರೆದಿದ್ದಾರೆ. ಇಲಾಖೆಗೆ ಸಂಬಂಧಪಟ್ಟಂತೆ ಮಾತನಾಡುವ ಸಾಧ್ಯತೆ ಜೊತೆಗೆ ಡಿಕೆಶಿ ಜೊತೆಗಿನ ಫೋಟೋ ಬಗ್ಗೆಯೂ ಕ್ಲಾರಿಟಿ ಕೊಡಬಹುದು ಎಂದು ಊಹಿಸಲಾಗಿದೆ.

GIPHY App Key not set. Please check settings