ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಕದನ ನಿಲ್ಲುವಂತೆ ಕಾಣಿಸ್ತ ಇಲ್ಲ. ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರ ಆಗುತ್ತೆ ಅಂತ ಡಿಕೆ ಶಿವಕುಮಾರ್ ಕಾಯ್ತಾ ಇದ್ದರು. ಆದರೆ ಅದು ಕೂಡ ಅದ್ಯಾಕೋ ಆಗ್ಲೇ ಇಲ್ಲ. ಇನ್ನು ಸಿದ್ದರಾಮಯ್ಯ ಅವರು ದಾಖಲೆ ಬರೆದ ಬಳಿಕವಾದರೂ ಏನಾದ್ರೂ ಆಗುತ್ತೆ ಅಂದುಕೊಂಡಿದ್ರು ಅದು ಆಗ್ಲಿಲ್ಲ. ಇದೀಗ ಬಜೆಟ್ ಮಂಡನೆ ಬಳಿಕ ಡಿಕೆ ಶಿವಕುಮಾರ್ ಡಿನ್ನರ್ ಪಾರ್ಟಿ ಇಟ್ಕೊಂಡಿದ್ದಾರೆ. ಆ ಬಗ್ಗೆ ಬಹಳಷ್ಟು ಚರ್ಚೆಗಳು ನಡೀತಾ ಇದೆ.
ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳಾಗಿದೆ. ಹೀಗಾಗಿ ಡಿನ್ನರ್ ಪಾರ್ಟಿಗೆ ಕರೆದಿದ್ದಾರೆ. ಮುಖ್ಯಮಂತ್ರಿ, ಎಂಎಲ್ಎ, ಎಂಎಲ್ಸಿಗಳು ಹೀಗೆ ಎಲ್ಲರನ್ನು ಕೂಡ ಪಾರ್ಟಿಗೆ ಆಹ್ವಾನಿಸಿದ್ದಾರೆ. ಮಾರ್ಚ್ 10ರಂದು ಔತಣಕೂಟದ ಆಯೋಜನೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಬೇಕು ಅಂತ ಡಿಕೆ ಶಿವಕುಮಾರ್ ಅವರಿಗೆ ಅಂದು ಕಾಲ್ ಬಂದಿತ್ತು. ಆಗ ಒಂದು ಗುಲಾಬಿ ಹೂವನ್ನು ತೆಗೆದುಕೊಂಡು ಹೋಗಿ ಸಿದ್ದರಾಮಯ್ಯ ಅವರಿಗೆ ನೀಡಿದ್ದರು. ಕೇಂದ್ರ ನನ್ನನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆ ಎಂದರು.
ಪರಮೇಶ್ವರ್ ಅವರನ್ನು ಹೊರತುಪಡಿಸಿದರೆ ಡಿಕೆ ಶಿವಕುಮಾರ್ ಹೆಚ್ಚಿನ ಕಾಲ ಅಧ್ಯಕ್ಷ ಸ್ಥಾನವನ್ನ ಅಲಂಕರಿಸಿದ್ದಾರೆ. ಇದಾದ ಮೇಲೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೇನಾದರೂ ಈ ಡಿನ್ನರ್ ಪಾರ್ಟಿಯನ್ನ ಕರೆದಿದ್ದಾರಾ ಎಂಬ ಪ್ರಶ್ನೆಗಳು ಎಲ್ಲರಿಗೂ ಮೂಡುತ್ತಿದೆ. ಕಾಂಗ್ರೆಸ್ ನಲ್ಲಿ ಹಲವು ಸಭೆಗಳು ಕೂಡ ನಡೆಯುತ್ತಿವೆ. ಡಿಕೆ ಶಿವಕುಮಾರ್ ಪರವಾಗಿ ಒಂದಷ್ಟು ಶಾಸಕರು ಬೆಂಬಲವನ್ನು ಕೂಡ ನೀಡಿದ್ದಾರೆ. ಮಾರ್ಚ್ 6ನೇ ತಾರೀಖು ಬಜೆಟ್ ಮಂಡನೆಯಾಗುತ್ತಿದೆ. ಬಳಿಕ ಏನೆಲ್ಲಾ ಬದಲಾವಣೆಗಳು ನಡೆಯಬಹುದು ಎಂಬುದನ್ನ ನೋಡಬೇಕಿದೆ.




