ಡಿಕೆಶಿ – ರಾಜಣ್ಣ ಭೇಟಿ : ಡಿಸಿಎಂ ಏನೇ ಮಾಡಿದರು ನಾನು ಸಿದ್ದರಾಮಯ್ಯ ಪರವೇ : ರಾಜಣ್ಣ ಖಡಕ್ ಮಾತು

1 Min Read

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಏನೇನೋ ನಡೀತಾ ಇದೆ. ಕುರ್ಚಿ ಕದನ ಮುಗಿಯುವಂತ ಕಾಣುತ್ತಿಲ್ಲ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಚಿವ ರಾಜಣ್ಣ ಅವರನ್ನ ಭೇಟಿಯಾಗಿದ್ದಾರೆ. ಇದು ಸಹಜವಾಗಿಯೇ ಕುತೂಹಲವನ್ನ ಹೆಚ್ಚಿಸಿದೆ. ಈ ಬಗ್ಗೆ ರಾಜಣ್ಣ ಹೇಳಿದ್ದು ಹೀಗೆ.

ನಾನು ಯಾವಾಗಲೂ ಸಿದ್ದರಾಮಯ್ಯ ಪರವೇ. ಡಿಕೆ ಶಿವಕುಮಾರ್ ಏನೇ ಪ್ರಯತ್ನ ಮಾಡಿದರು ನನ್ನ ಸ್ಟ್ಯಾಂಡ್ ಬದಲಾಗುವುದಿಲ್ಲ. ಹಿಂದೆ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ. ಡಿಕೆ ಶಿವಕುಮಾರ್ ನಿನ್ನೆ ಭೇಟಿ ಮಾಡಿದ್ದರು. ಅವರೇನು ಹುಡುಕಿಕೊಂಡು ಬಂದಿರಲಿಲ್ಲ. ಅವರು ಪಾರ್ಟಿ ಅಧ್ಯಕ್ಷರು ಮಾತನಾಡುತ್ತಾರೆ. ಯಾರನ್ನ ಬೇಕಾದರೂ ಭೇಟಿ ಮಾಡಬಹುದು. ಪಕ್ಷ ಸಂಘಟನೆ ಮಾಡೋಣಾ ಅಂದ್ರು, ನಾನು ಆಯ್ತು ಅಂದೆ. ಅದರ ಹೊರತಾಗಿ ಯಾವುದೇ ವಿಚಾರಗಳು ಚರ್ಚೆ ಆಗಿಲ್ಲ ಎಂದಿದ್ದಾರೆ.

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಮನೆಗೆ ಎಲ್ಲರೂ ಊಟಕ್ಕೆ ಹೋಗಿದ್ದರು. ಅದು ರಾಜಕೀಯ ಅಲ್ಲ. ಅದೊಂದು ಸೌಜನ್ಯ ಅಷ್ಟೇ. ಸಿಎಂ ವಿಚಾರವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಸಿಎಂ ಕೂಡ ನಾನೇ ಐದು ವರ್ಷ ಇರ್ತೀನಿ ಅಂತ ಪದೇ ಪದೇ ಹೇಳಿದ್ದಾರೆ. ಹೈಕಮಾಂಡ್ ಹೇಳುವ ತನಕ ನಾನು ಕಾಯ್ತೀನಿ. ನಮ್ಮ ಸ್ಟ್ಯಾಂಡ್ ಸಿದ್ದರಾಮಯ್ಯ ಪರವಾಗಿಯೇ ಇರುತ್ತೆ. ನಾನು ಹಿಂದೆ ಹೇಳಿದ ಎಲ್ಲಾ ಹೇಳಿಕೆಗೆ ಬದ್ಧ. ನಾನು ಸಿದ್ದರಾಮಯ್ಯ ಪರವೇ, No Change In My Stand. ಡಿ.ಕೆ ಶಿವಕುಮಾರ್ ಏನೇ ಪ್ರಯತ್ನ ಮಾಡಿದ್ರು ಕೂಡ ನನ್ನ ಹಿಂದಿನ ಎಲ್ಲ ಹೇಳಿಕೆಗಳಿಗೆ ನಾನು ಬದ್ಧ ಎಂದಿದ್ದಾರೆ

Share This Article