ಬೆಂಗಳೂರು: ರಾಮನಗರವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ಹೊಸ ಪ್ಲ್ಯಾನ್ ಒಂದನ್ನು ಸಿದ್ಧ ಮಾಡಿಕೊಂಡಿದ್ದಾರೆ. ಅದು ಜೆಡಿಎಸ್ ಮಾಜಿ ಶಾಸಕನಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.
ಇತ್ತಿಚೆಗೆ ಮಾಜಿ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಪೆನ್ ಡ್ರೈವ್ ಇದೆ ಅಂತಾನು ಹೇಳುತ್ತಲೇ ಬರುತ್ತಿದ್ದಾರೆ. ಸರ್ಕಾರ ರಚನೆ ಮಾಡಿದಾಗಿನಿಂದ ವಾಗ್ದಾಳಿ ನಡೆಸುತ್ತಿರುವ ಕುಮಾರಸ್ವಾಮಿ ಅವರ ಕೋಟೆ ಕೆಡವಿ, ಅಲ್ಲಿ ಕಾಂಗ್ರೆಸ್ ಸ್ಥಾಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಚನ್ನಪಟ್ಟಣದ ಜೆಡಿಎಸ್ ಮಾಜಿ ಶಾಸಕ ಎಂ ಸಿ ಅಶ್ವತ್ಥ್ ಅವರಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಅಶ್ವತ್ಥ್ ಅವರು ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದರು. ಅಷ್ಟೇ ಅಲ್ಲದೆ ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಮತ ಬರುವುದಕ್ಕೂ ಅಶ್ವತ್ಥ್ ಅವರ ಮುಂದಾಳತ್ವ ಹೆಚ್ಚಾಗಿ ಇತ್ತು. ಆದ್ರೆ ಚುನಾವಣೆ ಬಳಿಕ ಅಶ್ವತ್ಥ್ ಅವರ ಕಡೆಗೆ ಕುಮಾರಸ್ವಾಮಿ ಅವರು ಗಮನ ಹರಿಸಿಲ್ಲ ಅನ್ನೋದನ್ನೇ ಡಿಕೆ ಶಿವಕುಮಾರ್ ಬಂಡವಾಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಮಾಜಿ ಶಾಸಕ ಅಶ್ವತ್ಥ್ ಅವರ ಬಳಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಪ್ಲ್ಯಾನ್ ಪ್ರಕಾರ ಎಲ್ಲವೂ ನಡೆದರೆ ಅಶ್ವತ್ಥ್ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವ ಎಲ್ಲಾ ಸಾಧ್ಯತೆಯೂ ಇದೆ.