ಸಿದ್ದರಾಮಯ್ಯ ಪರ ಡಿಕೆಶಿ ಬ್ಯಾಟಿಂಗ್ : ಎನ್ಡಿಟಿವಿ ವರದಿಗೆ ನಮ್ಮ‌ ಸಿದ್ದರಾಮಯ್ಯ ಏನು ಅಂತ ಗೊತ್ತು ಎಂದಿದ್ದಾರೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಡೇಟ್ ಫಿಕ್ಸ್ ಆಗಿದೆ. ಮೂರು ಪಕ್ಷಗಳು ಸಾಕಷ್ಟು ತಯಾರಿ ನಡೆಸಿದೆ. ಗೆದ್ದರೆ ಸಿಎಂ ಸ್ಥಾನದಲ್ಲಿ ಕೂರುವುದು ಯಾರು ಎಂಬ ಪ್ರಶ್ನೆಗಳು ಪಕ್ಷಗಳಲ್ಲಿ ಏಳುತ್ತಿವೆ. ಈ ವಿಚಾರವೇ ಈಗ ಕಾಂಗ್ರೆಸ್ ನಲ್ಲಿ ಚರ್ಚಾ ವಿಷಯವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು NDTV ಯಲ್ಲಿ ನೀಡಿದ ಸಂದರ್ಶನದಲ್ಲಿ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಅದರ ವೆಬ್ಸೈಟ್ ನಲ್ಲಿ ‘ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವುದಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸಲ್ಲ’ ಎಂದು ಮುದ್ರಿಸಲಾಗಿದೆ. ಆದರೆ ಈ ವುಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯೆ ನಿಡೀದ್ದು, “ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಾನಾಡದ ಮಾತುಗಳನ್ನು ಉಲ್ಲೇಖಿಸಿ, NDTV ವರದಿಯೊಂದನ್ನು ಪ್ರಕಟಿಸಿದೆ. ಇದು ಸಂಪೂರ್ಣ ಸುಳ್ಳು. ಎನ್ಡಿಟಿವಿ ತಕ್ಷಣ ಆ ವರದಿಯನ್ನು ಅಳಿಸಿ ಹಾಕಿ, ತಿದ್ದುಪಡಿ‌ ಪ್ರಕಟಿಸಬೇಕು ಎಂದು ಸೂಚಿಸಿದೆ.

ಇನ್ನು ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿದ್ದು, ನಮ್ಮ ನಾಯಕರಾದ ಸಿದ್ದರಾಮಯ್ಯ ಏನು ಅನ್ನೋದು ನಂಗೆ ಗೊತ್ತು. ಮಾಧ್ಯಮಗಳು ಏನು ಅನ್ನೋದು ನನಗೆ ಗೊತ್ತು ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!