ಬೆಂಗಳೂರು: ನಾನು ಕೂಡ ಸಿಎಂ ಆಗಬೇಕು ಎಂಬ ಆಸೆ ಇದೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದರು. ಇದೀಗ ಜಮೀರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಎಲ್ಲರೂ ಕೂಡ ಪಕ್ಷದ ಅನ್ವಯ ನಡೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದಲ್ಲಿ ಮಾತನಾಡಿದ ಅವರು, ಪ್ರತಿಯಿಬ್ಬರು ಪಾರ್ಟಿಲೈನ್ ನಲ್ಲಿಯೇ ಹೋಗಬೇಕು. ಜಮೀರ್ ಮಾತಿಗೆ ನಾನು ಉತ್ತರಿಸುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯಗಳು ಬೇಕು. ಎಲ್ಲರು ಕೂಡ ಪಕ್ಷದ ಅನ್ವಯವೇ ನಡೆಯಬೇಕು ಎಂದಿದ್ದಾರೆ.
ಇಂದು ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸಿದೆ. ಈ ವಿಚಾರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ನಾಯಕರು ಇಂದು ಬೆಂಗಳೂರಿನಲ್ಲೂ ಪ್ರತಿಪ್ರಟನೆ ನಡೆಸಿದ್ದಾರೆ. ಈ ವೇಳೆ ಜಮೀರ್ ಅಹ್ಮದ್ ಮಾಧ್ಯಮದವರ ಜೊತೆ ಮಾತನಾಡುತ್ತಾ, ನನಗೂ ಕೂಡ ಸಿಎಂ ಆಗಬೇಕೆಂಬ ಆಸೆ ಇದೆ. ಯಾವುದೋ ಒಂದು ಸಮುದಾಯದ ಬೆಂಬಲವಿದ್ದರೆ ಸಿಎಂ ಆಗುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು. ಆ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.