ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಸಿಎಂ ಸ್ಥಾನಕ್ಕೆ ಸಾಕಷ್ಟು ಸ್ಪರ್ಧೆ ನಡೆದಿತ್ತು. ಆದ್ರೆ ಹೈಕಮಾಂಡ್ ಹೇಗೋ ಸಮಾಧಾನ ಮಾಡಿ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಿ, ಡಿಕೆಶಿಯನ್ನು ಡಿಸಿಎಂ ಮಾಡಿದ್ರು. ಇದೀಗ ಕೇದರನಾಥ ಮಠದ ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಇನ್ನೊಂದು ವರ್ಷದೊಳಗೆ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರು, ಸಿಎಂ ಆಗಲಿದ್ದಾರೆ ಎಂಬ ಸೂಚನೆ ನೀಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೇದಾರನಾಥ ಮಠದ ಜಗದ್ಗುರು ಭೀಮಾಶಂಕರ ಲಿಂಗ ಶಿವಾಚಾರ್ಯ ಶ್ರೀ ಅಭಯ ನೀಡಿದ್ದಾರೆ. ಇತ್ತಿಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಕೇದರನಾಥ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜಗದ್ಗುರು ಭೀಮಾಶಂಕರ ಲಿಂಗಶಿವಚಾರ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ.

ಈಗ ಅರ್ಧ ಆಗಿದೆ, ಇನ್ನೊಂದು ವರ್ಷದಲ್ಲಿ ಪೂರ್ಣ ಆಗುತ್ತೆ. ಪೂರ್ಣವನ್ನ ಕೇದಾರನಾಥ ಮಾಡ್ತಾನೆ ಎಂದು ಜಗದ್ಗುರುಗಳು ಹೇಳಿದ್ದಾರೆ. ಡಿಸಿಎಂ ಆಗಿದ್ದೀರಿ, ಸಿಎಂ ಆಗುತ್ತೀರಾ ಎಂದು ಜಗದ್ಗುರು ಭೀಮಾಶಂಕರ ಲಿಂಗ ಶಿವಾಚಾರ್ಯ ಶ್ರೀ ಅಭಯ ನೀಡಿದ್ದಾರೆ.

