1 ರೂಪಾಯಿಗೆ 1 ಲೀಟರ್ ಹಾಲು ಕೊಡ್ತಿರೋ ಕಂಪನಿ ವಿರುದ್ಧ ಡಿಕೆ ಸುರೇಶ್ ಗರಂ..!

1 Min Read

ಬೆಂಗಳೂರು: ಇವತ್ತು ಶಿರಾ ಕ್ಷೇತ್ರದಲ್ಲಿ ಇಡೀ ರಾಷ್ಟ್ರದಲ್ಲಿ ಕೋಟ್ಯಾಂತರ ಜನ ಹಾಲನ್ನ ನಂಬಿಕೊಂಡು ಜೀವನ ಮಾಡ್ತಾ ಇದ್ದಾರೆ. ಇವತ್ತು ಮಾರುಕಟ್ಟೆಯಲ್ಲಿ ಒಂದು ದಿಗ್ಬ್ರಮೆ ಕಂಡಿದೆ. ಕೆಲವು ಪ್ಲಿಪ್ ಕಾರ್ಟ್ ಎಂಬ ಸಂಸ್ಥೆ 1 ರೂಪಾಯಿಗೆ 1 ಲೀಟರ್ ಹಾಲು ಕೊಡ್ತಿದೆ. ಈ ಮೂಲಕ ರೈತ ಸಮುದಾಯವನ್ನು ಧ್ವಂಸ ಮಾಡುವಂತ ಕೃತ್ಯಕ್ಕೆ ಕೈ ಹಾಕಿದೆ ಎಂದು ಡಿಕೆ ಸುರೇಶ್ ಆಕ್ರೋಶ ಹೊರ ಹಾಕಿದ್ದಾರೆ.

ಒಂದು ರೂಪಾಯಿಗೆ ಒಂದು ಲೀಟರ್ ಹಾಲು, ಹಣ‌ಮಾಡುವ ಬರದಲ್ಲಿ, ರೈತರ ಕುಲಕ್ಕೆ ಬೆಂಕಿ ಇಡುವಂತ ಕೆಲಸವನ್ನ ಮಾಡ್ತಾ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸಿ, ತಕ್ಷಣ ಇದಕ್ಕೆ ಕಡಿವಾಣ ಹಾಕದೆ ಇದ್ದರೆ ಇಡೀ ರಾಷ್ಟ್ರದಾದ್ಯಂತ ಫ್ಲಿಪ್ ಕಾರ್ಟ್ ಸಂಸ್ಥೆಯ ವಿರುದ್ಧ ದಂಗೆ ಏಳಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತದೆ. ಇದರ ಬಗ್ಗೆ ಮಾನ್ಯ ಪ್ರಧಾನಮಂತ್ರಿಗಳಿಗೂ ಕೂಡ ಇವತ್ತು ಇಮೇಲ್ ಮಾಡುತ್ತಿದ್ದೇನೆ. ತಕ್ಷಣ ಈಗಗಾಲೇ ವ್ಯಾಪಕವಾದ ಪ್ರಚಾರವನ್ನ ಮಾಡಿದ್ದಾರೆ.

ಪ್ರಚಾರಕ್ಕೋಸ್ಕರವೇ 2 ಸಾವಿರ ಕೋಟಿ ಹಣವನ್ನು ವೆಚ್ಚ ಮಾಡ್ತಾ ಇದ್ದಾರೆ. ಇಡೀ ದೇಶದಾದ್ಯಂತ ಆನ್ಲೈನ್ ಫ್ಲಾಟ್ ಫಾರ್ಮ್ ನಲ್ಲಿ ಕೇವಲ ಒಂದು ರೂಪಾಯಿಗೆ ಹಾಲನ್ನ ಕೊಡ್ತಾ ಇರುವಂತದ್ದು. ಇದು ಅವರ ಮಾರ್ಕೆಟ್ ಶೇರ್ ನ ಪಡೆಯಬೇಕು ಎಂಬ ದೃಷ್ಟಿಯಿಂದ, ಸ್ಪರ್ಧೆ ಮಾಡಬೇಕು ಎಂಬ ದೃಷ್ಟಿಯಿಂದ ಇವತ್ತು ಮಾಡುತ್ತಿರುವಂತದ್ದು ರೈತ ಸಮುದಾಯಕ್ಕೇನೆ ಹೊಡೆತ ಬೀಳುತ್ತದೆ. ಪಬ್ಲಿಕ್ ಶೇರ್ ಹಣವನ್ನ ತಂದು ಬಂಡವಾಳ ಹಾಕಿ, ಒಕ್ಕೂಟ ವ್ಯವಸ್ಥೆಗಳಿಗೆ ಸುಮಾರು 60-75 ವರ್ಷದಿಂದ ಈ ಒಕ್ಕೂಟ ವ್ಯವಸ್ಥೆ ರೈತರನ್ನ ಕಾಪಾಡುತ್ತಾ ಬಂದಿದೆ ಎಂಬ ಮಾತನ್ನ ಹೇಳಿದ್ದಾರೆ.

Share This Article