ಸಂತೋಷ್ ಪಾಟೀಲ್ ಸಾವಿನ ತನಿಖೆ ಏನಾಯ್ತು..? ಅವರ ಪತ್ನಿ ರಾಜ್ಯಪಾಲರಿಗೆ ದೂರು ಕೊಟ್ಟವರೆ : ಡಿಕೆ ಸುರೇಶ್

2 Min Read

 

ಬೆಂಗಳೂರು: ಸಂತೋಷ್ ಪಾಟೀಲ್‌ ಪತ್ನಿ ಪತ್ರ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದು, ಸಂತೋಷ್ ಪಾಟೀಲ್ ೪೦% ಕಮೀಷನ್ ಧ್ವನಿ ಎತ್ತಿದ್ರು. ಅವರು ಆತ್ಮಹತ್ಯೆಯನ್ನ ಮಾಡಿಕೊಂಡ್ರು. ಅವರ ತನಿಖೆ ನಿಸ್ಪಕ್ಷಪಾತವಾಗಿ ಆಗ್ತಿಲ್ಲ. ಸರ್ಕಾರ ಪ್ರಕರಣ ಮುಚ್ಚೋಕೆ ಹೊರಟಿದೆ. ಸಂತೋಷ್ ಪಾಟೀಲ್ ಪತ್ನಿ‌ದೂರು ಸಲ್ಲಿಸಿದ್ದಾರೆ ಎಂದಿದ್ದಾರೆ.

ರಾಜ್ಯಪಾಲರನ್ನ ಭೇಟಿ‌ ಮಾಡಿ ದೂರು‌ ಸಲ್ಲಿಸಿದ್ದಾರೆ. ನಾವು ಪದೇ ಪದೇ ಹೇಳ್ತಾ ಇದ್ದೇವೆ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದ ತನಿಖೆ ಮಾಡಬೇಕು. ಸಂತೋಷ್ ಪಾಟೀಲ್ ಅಷ್ಟೇ ಅಲ್ಲ. ಕಂಟ್ರಾಕ್ಟರ್ ಅಸೋಸಿಯೇಷನ್ ಕೂಡ ದೂರು ಕೊಟ್ಟಿತ್ತು. ಕೇಂದ್ರ ಸರ್ಕಾರ ತನಿಖೆ ಮಾಡಬೇಕಿತ್ತು. ಐಟಿ,ಇಡಿ,ಸಿಬಿಐ ಸಂಸ್ಥೆ ಮಧ್ಯಪ್ರವೇಶ ಮಾಡಬೇಕಿತ್ತು. ಬಿಜೆಪಿ ನಾಯಕರು ಪ್ರಕರಣ ಮುಚ್ಚಲು ನೋಡ್ತಿದ್ದಾರೆ.

 

ಪಿಎಸ್ ಐ ಪ್ರಕರಣದಲ್ಲೂ ತನಿಖೆ ಆಗ್ತಿಲ್ಲ. ಈ ಪ್ರಕರಣದ ಬಗ್ಗೆ ತನಿಖೆಯಾಗಬೇಕು. ಯಾರ್ಯಾರು ಇದರಲ್ಲಿ‌ ಇದ್ದಾರೆ. ಇದರ ಬಗ್ಗೆ ತನಿಖೆಯಾಗಬೇಕು. ರಾಜ್ಯದ ಯುವಕರು ನಿಮಗೆ ರಕ್ಷಣೆ ಕೊಡ್ತಾರೆ. ಸರ್ಕಾರ ಒತ್ತಡಕ್ಕೆ ಮಣಿಯಬಾರದು. ಯಾರೇ ಆಗಲಿ ಒತ್ತಡ ಹಾಕಿದ್ರೆ ಸುಮ್ಮನಿರಬೇಡಿ. ರಾಜ್ಯದ ಪೊಲೀಸ್ ಇಲಾಖೆ ಗೌರವವನ್ನ ಉಳಿಸಬೇಕು. ಆರೋಪಿ ಸ್ಥಾನದಲ್ಲಿ ಇದ್ದೀರ ಅಂತ ಅನ್ಯತಾ ಬಾವಿಸಬೇಡಿ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶಗೊಂಡಿದ್ದಾರೆ.

 

ಮೊಟ್ಟೆ ವಿತರಣೆ ಬೇಡ ಎಂಬ ಕೇಂದ್ರದ ನಿಲುವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ.ಸುರೇಶ್, ಸರ್ಕಾರ ಬಡ ಮಕ್ಕಳ ಆಹಾರಕ್ಕೆ ಕಣ್ಣು ಹಾಕಿದೆ. ಬಿಜೆಪಿ ಅಜೆಂಡಾ ಮುಂದೆ ತರ್ತಿದೆ. ಮಕ್ಕಳ ಪೌಷ್ಠಿಕಾಂಶ ವಿಚಾರದಲ್ಲೂ ರಾಜಕೀಯ ತರಬೇಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಅತಿವೃಷ್ಠಿ ಹಿನ್ನೆಲೆ, ಸಚಿವರಿಗೆ ಬಿಜೆಪಿ ಸಭೆ ಮುಖ್ಯವಾಯ್ತೇ ಎಂಬ ಪ್ರಶ್ನೆ. ರಾಜ್ಯದಲ್ಲಿ ತೀವ್ರ ಮಳೆಯಾಗ್ತಿದೆ. ಕಳೆದ ಬಾರಿ ಆಗಿರುವ ನಷ್ಟಕ್ಕೆ‌ ಪರಿಹಾರ ಕೊಡ್ತಿಲ್ಲ. ಇಲ್ಲ ಸಲ್ಲದ ಸಬೂಬುಗಳನ್ನ ಹೇಳ್ತಾರೆ. ಅವರಿಗೆ ರೈತರನ್ನ ಕಂಗಾಲು ಮಾಡಬೇಕು ಅಷ್ಟೇ. ಅವರಿಗೆ ಬೇಕಾಗಿರೋದು ಕಮೀಷನ್. ಒಎಂಆರ್ ಶೀಟ್ ತಿದ್ದೋದಷ್ಟೇ. ರೈತರ ಪಂಪ್ ಸೆಟ್ ಮನೆಗಳು ಬಿದ್ದಿವೆ. ಅದಕ್ಕೆ ಪರಿಹಾರ ಇಲ್ಲ ಅಂತ ಅಧಿಕಾರಿಗಳು ಸಬೂಬು ಹೇಳ್ತಾರೆ. ಇನ್ನೂ ಈಗ ಇವರು ಎಲ್ಲಿಂದ ಪರಿಹಾರ ನೀಡ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *