ಹಾವೇರಿ : ರಾಜ್ಯದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಫೈಟ್ ಶುರುವಾಗಿದೆ. ಸಲೀಂ ಮತ್ತು ಉಗ್ರಪ್ಪ ನಡುವಿನ ಸಂಭಾಷಣೆಯೇ ಇದಕ್ಕೆ ಸಾಕ್ಷಿ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ವಿ ಎಸ್ ಉಗ್ರಪ್ಪ ಮೇಲೆ ಕ್ರಮ ಕೈಗೊಳ್ಳೋದಕ್ಕೆ ಡಿಕೆಶಿಗೆ ಧಮ್ ಇಲ್ಲ. ಅದೇ ಸಲೀಂ ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಡಿಕೆಶಿ ರಾಜ್ಯದ ಅಧ್ಯಕ್ಷರು. ಆದ್ರೆ ಅಧ್ಯಕ್ಷರ ತಕ್ಕಡಿ ಮೇಲೆಯೆ ಹೇಳ್ತಿಲ್ಲ. ಸಲೀಂ ಬಹಳ ವರ್ಷದಿಂದ ಕಾಂಗ್ರೆಸ್ ನಲ್ಲಿದ್ದವರು.
ಎಲ್ಲವೂ ಸಿದ್ದರಾಮಯ್ಯನವರ ಕೈನಲ್ಲಿದೆ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದವರು. ಅನೇಕ ಯೋಜನೆಗಳನ್ನ ಜಾರಿಗೆ ತಂದವರು ಕಡೆಗೆ ಚುನಾವಣೆಯಲ್ಲಿ ಸೋತರು. ಭಾಗ್ಯಗಳ ಹೆಸರೇಳಿ ದುರುಪಯೋಗ ಮಾಡಿಕೊಂಡರೆ ವಿನಃ. ಜನರುಗೆ ಯಾವ ಭಾಗ್ಯವೂ ಸಿಗಲಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಮುಳುಗುತ್ತಿರೋ ಹಡಗು. ಡಿಕೆಶಿ, ಸಿದ್ದರಾಮಯ್ಯ ಇಬ್ಬರು ಪ್ರಚಾರ ಮಾಡ್ತಿದ್ದಾರೆ. ಪಂಜಾಬ್ ನಲ್ಲೊಬ್ಬ ಸಿದ್ದು, ರಾಜ್ಯದಲ್ಲೊಬ್ಬ ಸಿದ್ದು ಇದ್ದಾರೆ. ಇಬ್ಬರು ಸಿದ್ದುಗಳ ಜಟಾಪಟಿಯಿಂದ ಕಾಂಗ್ರೆಸ್ ಅವನತಿಯಾಗುತ್ತಿದೆ ಎಂದರು.