ಬೆಂಗಳೂರು: ಇತ್ತಿಚೆಗಷ್ಟೇ ಡಿಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿ ಟಿಕೆಟ್ ಬೇಕು ಎಂದವರು ಅರ್ಜಿ ಸಲ್ಲಿಸಬಹುದು. ಮುಕ್ತವಾಗಿ ಅವಕಾಶ ನೀಡಲಾಗಿದೆ ಎಂದಿದ್ದರು. ಈ ಮಾತಿಗೆ ಬಿಜೆಪಿ ತಿರುಗೇಟು ನೀಡಿದ್ದು, ಟಿಕೆಟ್ ಗೆ ಲಕ್ಷ ಲಕ್ಷ ಹಣ ದೋಚುತ್ತಿದ್ದಾರೆ ಎಂದು ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, 2018ರಲ್ಲಿ ನಾಮಪತ್ರ ಸಲ್ಲಿಸಲು ಕಾರ್ಯಕರ್ತರಿಂದ @DKShivakumar ₹50-100 ಎಂದು ಭೀಕ್ಷೆ ಬೇಡಿದರು. ಕೋಟಿ ಕೋಟಿ ರೂಪಾಯಿ ಆಸ್ತಿ ಇದ್ದರೂ ಇದೀಗ @KPCCPresident ಅದಮೇಲೆ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಲಕ್ಷ ಲಕ್ಷ ಲೂಟಿ ಮಾಡಲು ಹೊರಟಿದೆ. ಇದರಿಂದ ಆಕಾಂಕ್ಷಿಗಳ ಜೇಬು ಖಾಲಿಯಾಗಲಿದೆಯೇ ಹೊರತು ಖಾಲಿಯಾದ ಜೇಬಿಗೆ ಟಿಕೆಟ್ ಬರುವುದಿಲ್ಲ.
ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ @INCKarnatakaದ ದುಷ್ಟರೆಲ್ಲ ಜಾಮೀನಿನ ಮೇಲೆ ಜೀವನ ಸಾಗಿಸುತ್ತಿದ್ದಾರೆ. ನಾಡನ್ನು ಅರಾಜಕತೆಯಿಂದ ತಪ್ಪಿಸಿದ ಬಿಜೆಪಿಯ ದಕ್ಷ ಆಡಳಿತವು ಭ್ರಷ್ಟರಿಗೆ ಸೆರೆಮನೆಯ ದಾರಿ ತೋರಿಸಿ, ಜನತೆಗೆ ನೆಮ್ಮದಿ ನೀಡುತ್ತಿದೆ ಎಂದಿದೆ.