ರಾಮನಗರ ಜಿಲ್ಲೆ ಕ್ಲೀನ್ ಮಾಡಲು ಬಂದಿದ್ದಾರೆ ಮಾಡಲಿ : ಅಶ್ವತ್ಥ್ ನಾರಾಯಣ್ ಗೆ ಟಾಂಗ್ ಕೊಟ್ಟ ಡಿಕೆಶಿ

suddionenews
1 Min Read

ಬೆಂಗಳೂರು: ಮೊದಲು ಅವರ ಇಲಾಖೆಯಲ್ಲಿ ನಡೆದಂತ ಯುವಕರಿಗೆ ಅನ್ಯಾಯವಾಗುತ್ತಿರುವುದು, ಸಬ್ ಇನ್ಸ್ಪೆಕ್ಟರ್ ಸೆಲೆಕ್ಷನ್, ಪಿಡಬ್ಲ್ಯೂಡಿ ಸೆಲೆಕ್ಷನ್ ನಿಂದ ಈಚೆ ಬರಲಿ ಅವರ ಸರ್ಕಾರ ಆಮೇಲೆ ಅವರ ಬಗ್ಗೆ ಮಾತನಾಡ್ತೀನಿ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ರಾಮನಗರಕ್ಕೆ ಸಂಬಂಧವಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಅವರು, ನಾನು ಒಂದು ಹಳ್ಳಿಯವನು. ರಾಮನಗರದವನು ಅಲ್ಲ ದೊಡ್ಡಹಾಲಳ್ಳಿ ಕೆಂಪೇಗೌಡನ ಮಗ ಶಿವಕುಮಾರ್. ಹಳ್ಳಿಯಿಂದ ಇಲ್ಲಿಗೆ ಬಂದು ರಾಜಕಾರಣ ಮಾಡ್ತಾ ಇದ್ದೀನಿ. ಪಾಪ ಅವ್ರು ರಾಮನಗರ ಜಿಲ್ಲೆಯನ್ನು ಕ್ಲೀನ್ ಮಾಡ್ತೀನಿ ಅಂತ ಬಂದಿದ್ದಾರೆ. ಕ್ಲೀನ್ ಮಾಡಲಿ ಬಹಳ ಸಂತೋಷ ಎಂದಿದ್ದಾರೆ.

ಎಲ್ಲದಕ್ಕೂ ನಾವೇ ಪಿತಾಮಹ. ಶೈಕ್ಷಣಿಕ ಡಿಪಾರ್ಟ್ಮೆಂಟ್ ನಲ್ಲಿ ಕೇಸು, ಕಂಪ್ಲೈಂಟ್, ಲೆಕ್ಚರರ್ಸ್, ಪೊಲೀಸ್ ಠಾಣೆಯಲ್ಲಿ ಕೇಸ್ ಹಾಕಿದ್ದಾರಲ್ಲ ಇನ್ವೆಸ್ಟಿಗೇಷನ್ ಮಾಡಿ ಅಂತ ಇವೆಲ್ಲಾ ನಾನು ಮಾಡಿದ್ನಾ. ನಮ್ಮ ಸರ್ಕಾರದಲ್ಲಿ ಆಗಿತ್ತಾ..? ಈ ರೀತಿ ಹಗರಣಗಳೆಲ್ಲಾ ಎಕ್ಸಾಮನ ಬರೆಯೋದು ಮತ್ತೊಂದು ನಾವ್ ಮಾಡಿದ್ವಾ..? ನಾವೂ ಕೇಳುತ್ತಾ ಇರೋದು ತನಿಖೆ ಮಾಡಿ, ಆ ಬಳಿಕ ಏನು ಬೇಕಾದರೂ ಮಾಡಿ ಅಂತ ಹೇಳುತ್ತಿರುವುದು. ದರ್ಶನ್ ಗೌಡ ಗೆ ನೋಟೀಸ್ ಕಳಿಸಿದ್ದೀರಾ. ಅವನ ಎಕ್ಸಾಮ್ ಏನಿದೆ, ಅವನು ಏನು ಪತ್ರ ಬರೆದಿದ್ದಾರೆ ಏನು ಇಲ್ಲ. ಇದಕ್ಕಿದ್ದಂತೆ ಬಂದ್ರೆ. ಎರಡು ನಿಮಿಷದಲ್ಲಿ ವಾಪಾಸ್ ಬಂದ ಅಂದ್ರೆ ಹೇಗೆ. ಒಂದು ವಿಚಾರಣೆ ಹೇಗೆ ನಡೀಬೇಕು. ಯಾರು ಅದಕ್ಕೆ ಕಾರಣ..? ಯಾರ ಹಿನ್ನೆಲೆ..? ಫೋನ್ ಮಾಡಿದವರು ಯಾರು ಎಂಬುದು ಅದೆಲ್ಲಾ ನಿಮಗೆ ಮಾಹಿತಿ ಬರ್ತಾ ಇರುತ್ತೆ. ಅದನ್ನೆಲ್ಲಾ ನೀವೂ ಲೀಕ್ ಮಾಡೋದಕ್ಕೆ ಸಾಧ್ಯವಾ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *