ರಾಮನಗರ: ನಿನ್ನೆಯಲ್ಲಾ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿದ್ದರು. ಹೆಚ್ಚು ಜನರನ್ನ ಸೇರಿಸಿಕೊಂಡು ಪಾದಯಾತ್ರೆ ಮಾಡಿದ್ದರಿಂದ ಕೊರೊನಾ ಹೆಚ್ಚಾಗುವ ಆರೋಗ್ಯ ಇಲಾಖೆಗೆ ಕಾಡಿತ್ತು. ಹೀಗಾಗಿ ನಿನ್ನೆ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವರಿಗೆ ಕೋವಿಡ್ ಟೆಸ್ಟ್ ಮಾಡಲು ಅಧಿಕಾರಿಗಳು ಬಂದಿದ್ದರು.
ಆದ್ರೆ ಈ ವೇಳೆ ಕೋವಿಡ್ ಟೆಸ್ಟ್ ಗೆ ಡಿಕೆ ಶಿವಕುಮಾರ್ ಕೂಡ ಒಪ್ಪಲಿಲ್ಲ. ಆವಾಜ್ ಹಾಕಿ ಕಳುಹಿಸಿದ್ದರು. ಆದ್ರೀಗ ಆ ಅಧಿಕಾರಿಗೆ ಕೊರೊನಾ ದೃಢಪಟ್ಟಿದೆ. ಕಳೆದ ಎರಡು ದಿನದಿಂದ ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿ ಜವರೇಗೌಡ ಅವರಿಗೆ ಸೋಂಕು ದೃಢಪಟ್ಟಿದೆ.
ಎಡಿಸಿ ಜವರೇಗೌಡ ಅವರು ಪಾದಯಾತ್ರೆ ನಡೆಸಬೇಡಿ ಎಂದು ಮನವಿ ಮಾಡಿದ್ದರು. ಜೊತೆಗೆ ನಿನ್ನೆ ಬೆಳಗ್ಗೆ ಪಾದಯಾತ್ರೆ ನಡೆಯುವ ಜಾಗಕ್ಕೂ ಬಂದು ಕೊರೊನಾ ನಿಯಮ ಪಾಲಿಸುವಂತೆ ಸೂಚಿಸಿದ್ದರು. ನಿನ್ನೆ ಸಂಜೆ ಡಿ ಕೆ ಶಿವಕುಮಾರ್ ಆರೋಗ್ಯ ತಪಾಸಣೆ ನಡೆಸೋದಕ್ಕೂ ಹೋಗಿದ್ದರು. ಇವರಿಗೆ ಸೋಂಕು ದೃಢವಾಗಿರುವ ಕಾರಣ ಸಂಸದ ಡಿ ಕೆ ಸುರೇಶ್ ಗರಂ ಆಗಿದ್ದಾರೆ. ನಮ್ಮಣ್ಣನಿಗೆ ಕೊರೊನಾ ಬರಲಿ ಅಂತಾನೆ ಸೋಂಕಿರುವ ವ್ಯಕ್ತಿಯನ್ನ ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ.