ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಡಿಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನದ ಮೇಲೆ ಆಸೆ ಇಲ್ಲ ಎಂಬ ಮಾತನ್ನ ಡಿಕೆ ಸುರೇಶ್ ಅವರು ಹೇಳಿದ್ದರು. ಈಗ ನೋಡಿದ್ರೆ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಗುಟ್ಟಾಗಿ ಭೇಟಿಯಾಗಿದ್ದು, ಸತೀಶ್ ಜಾರಕಿಹೊಳಿ ಮುಂದೆ ಕೆಪಿಸಿಸಿ ಅಧ್ಯಕ್ಷ ಆಗಬಹುದು ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ. ಇದೀಗ ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಸತೀಶ್ ಸಹದ್ಯೋಗಿಗಳು. ಈಗ ಕ್ಯಾಬಿನೇಟ್ ನಲ್ಲಿರ್ತೀವಿ, ರಾತ್ರಿ ಊಟಕ್ಕೆ ಸೇರ್ತಿವಿ. ಬೆಳಗ್ಗೆ ತಿಂಡಿಗೆ ಸೇರ್ತೀವಿ. ಇದೆಲ್ಲ ಇದ್ದೇ ಇರುತ್ತೆ. ಈಗ ನಾನು ಮತ್ತು ಎಂಬಿ ಪಾಟೀಲ್ ಅವರು ಚರ್ಚೆ ಮಾಡ್ತೀವಿ. ರಾಜ್ಯಕ್ಕೆ ಯಾವ ರೀತಿಯ ಇನ್ವೆಸ್ಟರ್ಸ್ ನ ಕರೀಬೇಕು. ಏನ್ ಮಾಡಬೇಕು. ಆಂಧ್ರ, ತಮಿಳುನಾಡು, ತೆಲಂಗಾಣ ನಮ್ಗೆ ಯಾವ ರೀತಿ ಸ್ಪರ್ಧೆ ನೀಡುತ್ತಿದೆ. ನಾವೇಗೆ ಸ್ಪರ್ಧ ಮಾಡಬೇಕು ಎಂಬೆಲ್ಲಾ ಚರ್ಚೆಗಳನ್ನ ಮಾಡ್ತೇವೆ.
ನಾನು ಸತೀಶ್ ರಾತ್ರಿ ಒಂದು ಮದುವೆಯಲ್ಲಿ. ಒಂದು ಕಡೆ ಕೂತು ರಾಜ್ಯದ ಹಾಗೂ ಪಕ್ಷದ ವಿಚಾರಗಳನ್ನ ಮಾತನಾಡುತ್ತಾ ಇದ್ದೆವು. ನಾವೆಲ್ಲಾ ಕೊಲಿಗ್ಸ್. ನೀವೊಳ್ಳೆ ವೈರಿಗಳ ಥರ ಲೆಕ್ಕ ಹಾಕ್ತಾ ಇದ್ದೀರಾ. ಏನಿಲ್ಲ. ರಾಜಕೀಯದಲ್ಲಿ ಬಾಂಧವ್ಯ, ನಂಟಸ್ತನ, ಸ್ನೇಹ ಎಲ್ಲಾ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕಾಳಗ ನಡೀತಾ ಇದೆ. ಇದರ ನಡುವೆ ಸತೀಶ್ ಜಾರಕುಹೊಳಿ ಹಾಗೂ ಡಿಕೆ ಶಿವಕುಮಾರ್ ಅವರು ಒಟ್ಟಿಗೆ ಕೂತು ಹೆಚ್ಚು ಕಾಲ ಮಾತನಾಡಿರುವುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
