ಮಂಡ್ಯ: ಸಂಸದೆ ಸುಮಲತಾ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ಮಾತಿದೆ. ಆದರೆ ಆ ವಿಚಾರಕ್ಕೆ ಸುಮಲತಾ ಕೂಡ ಅದಾಗಲೇ ಉತ್ತರ ಕೂಡ ನೀಡಿದ್ದಾರೆ. ಇದೀಗ ಮತ್ತೆ ಪಕ್ಷ ಸೇರ್ಪಡೆ ವಿಚಾರ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಮಾತನಾಡಿದ ಸುಮಲತಾ ಅವರು, ಹೊಸ ಬಾಂಬ್ ಒಂದನ್ನು ಹಾಕಿದ್ದಾರೆ. ನಾನು ಈ ಮೊದಲೇ ಡಿಕೆ ಶಿವಕುಮಾರ್ ಬಳಿ ಮಾತನಾಡಿದ್ದೇ ಎಂದಿದ್ದಾರೆ.
ಪಕ್ಷಗಳ ಸೇರ್ಪಡೆ ಬಗ್ಗೆ ನಾನಿನ್ನು ನಿರ್ಧಾರ ಮಾಡಿಲ್ಲ. ಬೆಂಬಲಿಗರು ಮತ್ತು ಅಭಿಮಾನಿಗಳ ಜೊತೆಗೆ ನಾನು ಚರ್ಚೆ ಮಾಡುತ್ತೇನೆ. ನನಗೆ ನಾನೇ ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಂಡ್ಯದ ಜನರೇ ನನಗೆ ಹೈಕಮಾಂಡ್ ಇದ್ದಂತೆ ಎಂದಿದ್ದಾರೆ.
ಇನ್ನು ಇದೆ ವೇಳೆ ಸುಮಲತಾ ಅವರು ಬಿಜೆಪಿಯ ಅಸೋಸಿಯೇಟ್ ಇದ್ದಂತೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡೊರುವ ಸುಮಲತಾ, ಅವರ ಹೇಳಿಕೆ ಕೇಳಿ ನನಗೆ ಆಶ್ಚರ್ಯ ಆಗಿದೆ. ಮಂಡ್ಯದಲ್ಲಿ ಜನರ ನಾಡಿಮಿಡಿತ ಆಗಿಲ್ವಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೇಳಿದ್ದೆ. ಆದ್ರೆ ಡಿಕೆ ಶಿವಕುಮಾರ್ ನನ್ನ ಮಾತನ್ನು ಕೇಳಿಸಿಕೊಳ್ಳುವುದಕ್ಕೂ ರೆಡಿ ಇರಲಿಲ್ಲ. ಅದು ಜೆಡಿಎಸ್ ಭದ್ರಕೋಟೆ. ಕಾಂಗ್ರೆಸ್ ನಿಂದ ನಿಂತರು ನೀವೂ ಗೆಲ್ಲೋದಕ್ಕೆ ಆಗಲ್ಲ. ಕಾಂಗ್ರೆಸ್ ಪಕ್ಷಕ್ಕೂ ಉಪಯೋಗವಿಲ್ಲ. ಬೆಂಗಳೂರಲ್ಲಿ ನಿಲ್ಲಿ, ನಾವೂ ಸಪೋರ್ಟ್ ಮಾಡ್ತೀವಿ ಅಂದಿದ್ರು. ಅವರ ಮಾತನ್ನು ನಾನು ಸೀರಿಯಸ್ ಆಗಿ ತೆಗೆದುಕೊಂಡಿದ್ರೆ ವಿಚಾರವೇ ಬೇರೆ ಆಗುತ್ತಾ ಇತ್ತು ಎಂದಿದ್ದಾರೆ.