ಬೆಂಗಳೂರು: ಎಲ್ಲೆಡೆ ಓಮಿಕ್ರಾನ್ ಅನ್ನೊ ವೈರಸ್ ಈಗ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲರೂ ಭಯದಲ್ಲೇ ಜೀವಿಸುವಂತಾಗಿದೆ. ಮತ್ತೊಂದು ಕಡೆ ಕೊರೊನಾ ಭಯವೂ ಕೊಂಚ ಹೆಚ್ಚಾಗಿಯೇ ಇದೆ. ಈ ಬಗ್ಗೆ ಸ್ವಲ್ಪ ಧೈರ್ಯ ತುಂಬಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯಕ್ಕೆ ಮತ್ತೆ ಕೊರೊನಾ ಬರುವುದಿಲ್ಲ. ಯಾರೂ ಯಾರನ್ನು ಗಾಬರಿ ಪಡಿಸಬೇಡಿ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜನರಿಗೆ ಜಾಗೃತಿ ಮೂಡಿಸಬೇಕು ಬರೀ ಕೇರಳ ಅಂತ ಇದ್ದಾರೆ, ಆದ್ರೆ ಎಲ್ಲಾ ಕಡೆ ಗಮನಹರಿಸಬೇಕು. ಜನರಿಗೆ ಗಾಬರಿಪಡಿಸುವಂಥ ಕೆಲಸ ಆಗಬಾರದು ಎಂದಿದ್ದಾರೆ.
ಇನ್ನು ಇದೇ ವೇಳೆ ಈಶ್ವರಪ್ಪ ಅವರಿಗೂ ತಿರುಗೇಟು ನೀಡಿದ್ದಾರೆ. ಈ ಹಿಂದೆ ಸಿದ್ರಾಮಯ್ಯ ಒಬ್ಬ ಕುಡುಕ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಮೈಸೂರು ಚಾಮುಂಡಿ ಬೆಟ್ಟದಲ್ಲಿ ಇದ್ಯಾಲ್ಲ ಅದೇನದು..? ಎಂದು ಪ್ರಶ್ನಿಸಿ ತಕ್ಷಣ ಆ ಅದೇ ಮಹೀಷಾಸುರ ಅವ್ರು ಹಿಡಿದುಕೊಂಡಿದ್ದಾರಲ್ಲ ಅದನ್ನೊಂದು ಅವರ ಕೈಗೆ ಕೊಟ್ಬಿಡಿ ಎಂದು ವ್ಯಂಗ್ಯವಾಡಿದ್ದಾರೆ. ಪರೋಕ್ಷವಾಗಿ ಮಹಿಷಾಸುರನಿಗೆ ಹೋಲಿಕೆ ಮಾಡಿದ್ದಾರೆ.
ಇಂದು ಇಂದಿರಾ ಗಾಂಧಿ ಛಾಯಾ ಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಡಿ ಕೆ ಶಿವಕುಮಾರ್, ಇಂದಿರಾ ಗಾಂಧಿಗೂ, ಕರ್ನಾಟಕಕ್ಕೂ ಸಂಬಂಧ ಇದೆ.. ರಾಜಕೀಯದಲ್ಲಿ ಮರುಜೀವ ಸಿಕ್ಕಿದ್ದು ಇಲ್ಲೇ. ಅವರ ಸಾಧನೆ ಯುವ ಜನರಿಗೆ ತಿಳಿಯಬೇಕು. ಇದು ಕಾಂಗ್ರೆಸ್ ಕಾರ್ಯಕ್ರಮವಲ್ಲ. ಎಲ್ಲರೂ ಬಂದು ತಿಳುವಳಿಕೆ ತಿಳಿದುಕೊಳ್ಳಬೇಕು ಎಂದರು.