ಬೆಂಗಳೂರು: ಸ್ವಾಮೀಜಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಮೇಕೆದಾಟು ಯೋಜನೆ ಹೋರಾಟಕ್ಕೆ ವಿಚಾರದಲ್ಲಿ ಹೋರಾಟ ಮಾಡಿದಾಗ ಎಷ್ಟೋ ಜನ ಸ್ವಾಮೀಜಿಗಳು ಬರುವುದಕ್ಕೆ ಗಡ ಗಡ ಅಂತ ಹೆದರಿ ಬಿಟ್ಟರು ಬರುವುದಕ್ಕೆ. ಆಗ ಮುರುಘಾ ಮಠದ ಶ್ರೀಗಳು ಒಂದು ಡಜ್ಹನ್ ಸ್ವಾಮೀಜಿಗಳನ್ನು ಕರೆದುಕೊಂಡು ಬಂದು, ಈ ರಾಜ್ಯದ ಹಿತಕ್ಕಾಗಿ, ನೀರಿಗೋಸ್ಕರ ಹೋರಾಟ ಮಾಡುತ್ತಿದ್ದವರಿಗೆ ಬೆನ್ನು ತಟ್ಟಿ ಆಶೀರ್ವಾದ ಮಾಡಿದ್ದರು. ನನ್ನ ಜೀವಮಾನ ಅದನ್ನು ಮರೆಯೋದಕ್ಕೆ ಸಾಧ್ಯವಿಲ್ಲ. ಶರಣಾಗಿದ್ದೀನಿ ಶರಣಾಗಿದ್ದೀನಿ ಅಂತ ಹೇಳುತ್ತೇನೆ.
ಕಷ್ಟ ಕಾಲದಲ್ಲಿ ಯಾರು ಧೈರ್ಯ ಕೊಡುತ್ತಾರೋ, ಸ್ಪೂರ್ತಿ ಕೊಡುತ್ತಾರೋ, ಆಶೀರ್ವಾದ ಮಾಡುತ್ತಾರೋ ಅದು ಬಹಳ ಮುಖ್ಯ. ಈ ಮಠಗಳಿಂದ ಸಮಾಜದ ಎಲ್ಲಾ ಜನತೆಗೆ ಒಂದು ಶಕ್ತಿಯನ್ನು ಕೊಟ್ಟು, ಈ ಧರ್ಮವನ್ನು ಉಳಿಸಲು ಮಾಡಿರುವ ಪ್ರಯತ್ನಕ್ಕೆ ಅದಕ್ಕೆ ಇವತ್ತು ನಾವೆಲ್ಲಾ ಸೇರಿ ಅವರನ್ನು ಅಭಿನಂದಿಸಬೇಕು. ನಮಗೆ ಏನು ಕೊಡಲು ಸಾಧ್ಯ. ನಮ್ಮ ಆಯಸ್ಸನ್ನು ಸೇರಿ ಇನ್ನಷ್ಟು ಹೆಚ್ಚಿಗೆ ಕೊಡಪ್ಪ ಅಂತ ಹೇಳಬೇಕು.
ಸ್ವಾಮೀಜಿಗಳು ಮಾಡಿದ್ದಂತ ಸೇವೆಯನ್ನು ನಾವೂ ಸ್ಮರಿಸುತ್ತಿದ್ದೇವೆ. ನೆಮ್ಮದಿ ಸಿಗಲಿ, ಶಾಂತಿ ಸಿಗಲಿ ಎಂಬ ವಿಚಾರಕ್ಕೆ ನಾವೆಲ್ಲಾ ಒ್ರಯತ್ನ ಮಾಡ್ತಾ ಇದ್ದೇವೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ.. ಧರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ, ಧರ್ಮಕ್ಕಾಗಿ ತಾಳಿರಿ. ನಮಗೆ ಧರ್ಮ ಬೇಡ ಅಂತ ಹೇಳಬಹುದು. ಆದರೆ ಧರ್ಮ ಬಿಡಲು ಸಾಧ್ಯವಿಲ್ಲ. ನಾವೂ ಹುಟ್ಟುವಾಗ ಯಾರು ಕೂಡ ನಮ್ಮ ಧರ್ಮ ಯಾವುದು ಅಂತ ಗೊತ್ತಿಲ್ಲ. ತಂದೆ ತಾಯಿ ಜನ್ಮ ಕೊಟ್ಟಿದ್ದಾರೆ ಬಾಳುತ್ತಿದ್ದೇವೆ. ಉಡದಾರ ಹಾಕೋದು, ಮೂಗು ಚುಚ್ಚೋದು ಕೂಡ ಧರ್ಮವೆ ಎಂದು ಧರ್ಮದ ಬಗ್ಗೆ ಮಾತನಾಡಿದ್ದಾರೆ.