ಬೆಂಗಳೂರು: ಪಿಎಸ್ಐ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದಾಳೆ. ಈ ನಡುವೆ ದಿವ್ಯಾ ಹಾಗರಗಿ ಮತ್ತು ಆರಗ ಜ್ಞಾನೇಂದ್ರ ಅವರು ಇರುವ ಫೋಟೋವನ್ನು ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದರು. ಇಂದು ಬಿಜೆಪಿ ನಾಯಕರು ತಿರುಗೇಟು ನೀಡಿ ಡಿಕೆಶಿ ಹಾಗೂ ದಿವ್ಯಾ ಇರುವ ಫೋಟೋ ಹರಿಬಿಟ್ಟಿದ್ದರು. ಈ ಸಂಬಂಧ ಮಾತನಾಡಿದ ಡಿಕೆ ಶಿವಕುಮಾರ್, ನನಗೂ ನೋಟೋಸ್ ನೀಡಲಿ ಎಂದಿದ್ದಾರೆ.
ನಾನು ಮಂತ್ರಿಯಾಗಿದ್ದವನು. ನೂರಾರು ಜನ ಬಂದು ನನ್ನನ್ನು ಭೇಟಿಯಾಗುತ್ತಾರೆ. ದಿವ್ಯಾ ಹಾಗರಗಿ ಕೂಡ ಅದೇ ರೀತಿ ಭೇಟಿ ಮಾಡಿರುತ್ತಾತೆ. ಯಾವುದೋ ಡೆಲಿಗೇಷನ್ ಕರೆ ತಂದಿದ್ದರು. ಬಿಜೆಪಿಯವರು ನಮ್ಮ ಬಗ್ಗೆ ನಾತನಾಡುತ್ತಲೇ ಇರುತ್ತಾರೆ. ನಮ್ಮ ಹೆಸರು ಓಡಾಡುತ್ತಿರುತ್ತೆ. ಓಡಾಡಲಿ ಎಷ್ಟು ದಿನ ಓಡುತ್ತೋ ಅಷ್ಟು ದಿನ ಎಂದಿದ್ದಾರೆ.
ಇನ್ನು ಪ್ರಶಾಂತ್ ಕಿಶೋರ್ ಪಕ್ಷದ ಮನವಿ ತಿರಸ್ಕರಿಸಿದ ಬಗ್ಗೆ ಮಾತನಾಡಿ, ಬಹಳ ದಿನಗಳಿಂದ ಆ ಬಗ್ಗೆ ಚರ್ಚೆ ನಡೆದಿದೆ. ನಾನು ಇಲ್ಲಿ ಆ ಬಗ್ಗೆ ಮಾತನಾಡಲು ಹಾಗಲ್ಲ. ರಾಷ್ಟ್ರ ನಾಯಕರು ತೀರ್ಮಾನ ಮಾಡುತ್ತಾರೆ. ಅವರ ನಿರ್ಧಾರ ಅವರು ಹೇಳಿದ್ದಾರೆ ಎಂದಿದ್ದಾರೆ.