ಹುಬ್ಬಳ್ಳಿ: ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಡಿಪಿಆರ್ ಮಾಡುವುದಕ್ಕೆ ಅನುಮತಿ ಸಿಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರದ್ದು ಸುಳ್ಳಿನ ಯೂನಿವರ್ಸಿಟಿಯಾಗಿ ಬಿಟ್ಟಿದೆ. ರಾಜ್ಯದಲ್ಲಿ 26 ಸಂಸದರು ಬಿಜೆಪಿಯವರೇ ಆಗಿದ್ದಾರೆ. ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್ ಆಗಿದ್ದಾರೆ. ಮೂರು ವರ್ಷದಿಂದ ಇವರಿಂದ ಮಹಾದಾಯಿ ಯೋಜನೆಯನ್ನು ಜಾರಿಗೆ ತರಲು ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಮಹಾದಾಯಿಗಾಗಿ ನಾವೂ ಹಾಗೂ ರೈತರು ಹೋರಾಟ ಮಾಡಿ, ಒಂದು ಹಂತಕ್ಕೆ ತಂದಿದ್ದೇವೆ. ಮೂರು ರಾಜ್ಯದಲ್ಲೂ ಅವರದ್ದೇ ಪಕ್ಷ ಜಾರಿಯಲ್ಲಿದೆ. ಆದರೂ ಇಷ್ಟು ವರ್ಷ ಬೇಕಾಯಿತು ಅವರಿಗೆ. ಸುಪ್ರೀಂಕೋರ್ಟ್ ತೀರ್ಪಿಗೆ ಒಳಪಟ್ಟು ಕಾಮಗಾರಿ ಆರಂಭಿಸಿ ಎಂದು ಹೇಳಿದ್ದಾರೆ. ಗೋವಾ ಮಂತ್ರಿಯೊಬ್ಬ ರಾಜೀನಾಮೆ ಕೊಡ್ತಾನಂತೆ. ಆಯ್ತು ಕೊಡಲಿಬಿಡಿ. ರಾಜ್ಯದಲ್ಲಿ 26 ಸಂಸದರಿದ್ದಾರೆ. ಇವರೆಲ್ಲಾ ಸೇರಿ ಮಹದಾಯಿಗಾಗಿ ಒಮ್ಮೆಯೂ ಪ್ರಧಾನಮಂತ್ರಿ ಬಳಿ ಮಾತನಾಡಿಲ್ಲ.
ಪ್ರಹ್ಲಾದ್ ಜೋಶಿ ಎಷ್ಟೊಂದು ಅಪ್ಡೇಟ್ ಆಗಿದ್ದಾರೆ ಎಂಬುದು ಪತ್ರ ಓದಲಿ ಗೊತ್ತಾಗುತ್ತೆ. ಕೇಂದ್ರ ಸರ್ಕಾರದ ಅನುಮತಿ ನೀಡಿದ ಪತ್ರದಲ್ಲಿ ಕಂಡೀಷನ್ ಹಾಕಿದ್ದಾರೆ. ನಾವೆಲ್ಲಾ ಸತ್ತ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಾ..? ನಮಗೆ ಅಧಿಕಾರ ಕೊಡಿ, ಆರು ತಿಂಗಳಲ್ಲಿ ಈ ಯೋಜನೆಯನ್ನು ಬಡಿದು ಹಾಕುತ್ತೀವಿ ಎಂದು ಸವಾಲು ಹಾಕಿದ್ದಾರೆ.