Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜಕೀಯದಲ್ಲಿ ಏನು ಶಾಶ್ವತವಲ್ಲ : ಜೆಡಿಎಸ್ ಗೆ ಬೆಂಬಲ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು..?

Facebook
Twitter
Telegram
WhatsApp

 

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ನ ಬೆಂಬಲ ಕೋರಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದ್ದು, ನಾನೊಬ್ಬ ಕಾರ್ಯಕರ್ತ. ಅವರಲ್ಲಿ ಸ್ವಾತಂತ್ರ್ಯವಾಗಿ ಏನು ಬೇಕಾದರೂ ಮಾತನಾಡಬಹುದು. ನಾನು ಮಾತಾಡಬೇಕಾದರೆ ಪಕ್ಷದ ನಾಯಕರುಗಳು, ವರಿಷ್ಠರು ಎಲ್ಲಾ ಸೇರಿ ಮಾತನಾಡಬೇಕು.

ಕುಮಾರಣ್ಣನವರು ಸರ್ಕಾರ ಹೋಗಿದ್ದು, ತಾನು ಹೊರಗಡೆ ದೇಶದಲ್ಲಿ ಉಳಿದುಕೊಂಡಿದ್ದು, ಇಬ್ರಾಹಿಂ ಮಾತನಾಡಿದ್ದು ಇವೆಲ್ಲಾ ಕೂಡ ನಮ್ಮ ಕಣ್ಣುಗಳಲ್ಲಿ ಇದೆ. ಅದೆಲ್ಲವನ್ನು ನಾನು ವ್ಯಖ್ಯಾನ ಮಾಡುವುದಕ್ಕೆ ಹೋಗುವುದಿಲ್ಲ. ರಾಜಕೀಯದಲ್ಲಿ ಯಾವುದೂ ಶಾಶ್ವತವೂ ಇಲ್ಲ. ಅದನ್ನು ನಾನು ಒಪ್ಪುತ್ತೇನೆ. ಕಾಂಗ್ರೆಸ್ ಎಂದರೆ ನಾನೊಬ್ಬ ಅಲ್ಲ ಇಡೀ ನಮ್ಮ ಪಕ್ಷದ ನಾಯಕರುಗಳೆಲ್ಲ ಚರ್ಚೆ ಮಾಡಬೇಕು, ಅವರು ಚರ್ಚೆ ಮಾಡಿದ್ದಾರೆ. ನಿನ್ನೆ ಸುರ್ಜೆವಾಲ ಅವರು ಮನವಿ ಮಾಡಿದ್ದಾರೆ. ಸುರ್ಜೇವಾಲ ಮನವಿ ಎಂದರೆ ವರಿಷ್ಠರು ಮನವಿ ಮಾಡಿಕೊಂಡಂತೆ.

ಪಾಲಿಟಿಕ್ಸ್ ಈಸ್ ಎ ಆರ್ಟ್ ಆಫ್ ಪಾಸಿಬಲಿಟಿ. ನುಡಿದಂಗೆ ಯಾರಾದ್ರೂ ನಡೆದುಕೊಂಡಿದ್ದರೆ ಮಾತನಾಡಬಹುದು. ನಮ್ಮ ಸರ್ಕಾರ, ನಾವೂ 37 ಜನ ಇದ್ದದ್ದಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಸಪೋರ್ಟ್ ಮಾಡಿದ್ದೀವಿ. ನನ್ನ ವೈಯಕ್ತಿಕ ವಿಚಾರ ಬೇರೆ. ಪಕ್ಷ ತುಂಬಾ ಮುಖ್ಯ. ಅವರಿಗೆ ಹೇಗೆ ಸ್ಚಾಭಿಮಾನ ಹೇಗೆ ಕಾಡುತ್ತಾ ಇದೆ. ಚುನಾವಣೆಗೆ ಅರ್ಜಿ ಹಾಕುವುದಕ್ಕೂ ಮುಂಚಿತವಾಗಿ ಕಾಂಗ್ರೆಸ್ ನವರ ಜೊತೆ ಮಾತುಕತೆ ಮಾಡಿ, ಬಂದು ತಿಳಿದುಕೊಂಡು ನಾವೀಗೆ ಇರ್ತೀವಿ ಅಂತ ಹೇಳಿ ವರಿಷ್ಟರ ಬಳಿ ಮಾತನಾಡಿ ಅವರು ಏನು ಹೇಳುತ್ತಾರೊ ಅದನ್ನು ಕೇಳುತ್ತೇವೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ APMC : ಸೂರ್ಯಕಾಂತಿ, ಶೇಂಗಾ, ಕಡಲೆ ಸೇರಿದಂತೆ ಇತರ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ…!

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ (ಸರಕು)    ಇಂದಿನ             

ಮುತ್ತಪ್ಪ ರೈ ಆಸ್ತಿ ವಿವಾದ ಇತ್ಯರ್ಥ : ಎರಡನೇ ಪತ್ನಿಗೆ 100 ಕೋಟಿ ಆಸ್ತಿ

ಬೆಂಗಳೂರು :ಮಾಜಿ ಡಾನ್ ಮುತ್ತಪ್ಪ ರೈ ಸಾವನ್ನಪ್ಪಿದ ಬಳಿಕ ಅವರ ಆಸ್ತಿ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಸಾವಿರಾರು ಕೋಟಿ ಆಸ್ತಿಯನ್ನು ಮುತ್ತಪ್ಪ ರೈ ಸಾಯುವುದಕ್ಕೂ ಮುನ್ನ ಮನೆಕೆಲಸದವರಿಗೂ ಸೇರಿ ಬರೆದಿದ್ದರು. 2019ರಲ್ಲಿ

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

error: Content is protected !!