ಬೆಂಗಳೂರು: ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಜೋರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಬೆಂಗಳೂರಿನಲ್ಲಿ ರಾಜಭವನ ಚಲೋ ನಡೆಸುತ್ತಿದ್ದು, ಕೆಪಿಸಿಸಿಯಿಂದ ರಾಜಭವನಕ್ಕೆ ಹೊರಡಲಿದ್ದಾರೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದ್ದು,
ಬಿಜೆಪಿನವರು ಏನಾದರೂ ಆರೋಪ ಮಾಡಲಿ. ಎಲ್ಲಾ ಸುಳ್ಳು ಕೇಸನ್ನು ಹಾಕಿ ಹೆದರಿಸಬೇಕು ಬೆದರಿಸಬೇಕು ಎನ್ನುತ್ತಿದ್ದಾರೆ. ಅದಕ್ಕೆ ನಾವೂ ಅವರಿಗೆ ಹೇಳುತ್ತಾ ಇದ್ದೀವಿ. ನೀವೂ ಬರೀ ಸುಳ್ಳು ಕೇಸು, ತೊಂದರೆ ಕೊಡುವುದಕ್ಕೆ ದ್ವೇಷದ ರಾಜಕಾರಣ ಮಾಡುತ್ತಾ ಇದ್ದೀರಿ. ನಮ್ಮ ಕಾಂಗ್ರೆಸ್ ಪಕ್ಷದ ಆಸ್ತಿ ಯಂಗ್ ಇಂಡಿಯಾ, ನಮ್ಮ ಕಾರ್ಯಕರ್ತರ ದುಡ್ಡು ಕೊಟ್ಟಿದ್ದೀವಿ. ಉಅರ್ ನೀವೂ ಅದನ್ನು ಕೇಳುವುದಕ್ಕೆ.
ಆಯ್ತು ತೊಂದರೆ ಕೊಡುತ್ತೀರಾ ಕೊಡಿ, ಜೈಲಿಗೆ ಹಾಕಿಕೊಳ್ತೀರಾ ಹಾಕಿ. ಬಿಜೆಪಿಯವರು ಯಾರ್ಯಾರು ಕೋವಿಡ್ ಉಲ್ಲಂಘನೆ ಮಾಡಿದ್ದಾರೆ. ಆರೋಗ್ಯ ಸಚಿವರ ಮೇಲೆ ಮೊದಲು ಕೇಸ್ ಹಾಕಬೇಕು. ನಮ್ಮ ಮೇಲೆ ಹಾಕ್ತಾರೆ. ಆದ್ರೆ ಈಶ್ವರಪ್ಪ ಮೇಲೆ ಯಾಕೆ ಇನ್ನು ಕೇಸ್ ಹಾಕಿಲ್ಲ. ರಾಜ್ಯದ ಮಂತ್ರಿಗಳ ಮೇಲೆ ಹಾಕಿಲ್ಲ, ಕೇಂದ್ರದವರ ಮೇಲೆ ಹಾಕಿಲ್ಲ. ಬಿಜೆಪಿ ಕಾರ್ಯಕ್ರಮಕ್ಕೆ ಯಾವುದೇ ಕೇಸ್ ಹಾಕಿಲ್ಲ. ನಮ್ಮ ಮೇಲೆ ಮಾತ್ರ ಹಾಕುತ್ತಾರೆ ಹಾಕಿಕೊಳ್ಳಲಿ ಎಂದಿದ್ದಾರೆ.