ಬೆಳಗಾವಿ: ವಿರೋಧ ಪಕ್ಷಗಳ ವಿರೋಧದ ನಡುವೆಯೇ ಆಡಳಿತ ಪಕ್ಷ ಮತಾಂತರ ನಿಷೇಧ ಕಾಯ್ದೆಯನ್ನ ಮಂಡಿಸಿದೆ. ಇದು ವಿರೋಧ ಪಕ್ಷದವರ ಕೋಪಕ್ಕೆ ಮತ್ತಷ್ಟು ಕಾರಣವಾಗಿದೆ. ಇದೀಗ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೆಂಡಾಮಂಡಲಾರಾಗಿದ್ದಾರೆ.
ಶಾಸಕರಿಗೆ ನೀಡುವ ಪ್ರತಿಯನ್ನ ಹರಿದು ಹಾಕಿ ವಿರೋಧ ವ್ಯಕ್ತಪಡಿಸಿದ್ದು, ನೂತನ ಶಾಸಕರಾದರೆ ಒಪ್ಪಿಕೊಳ್ಳಬಹುದು. ಎಲ್ಲಾ ತಿಳಿದ ನೀವೇ ಈ ರೀತಿ ಮಾಡಿದರೆ ಹೇಗೆ ಎಂದು ಸ್ಪೀಕರ್ ಕಾಗೇರಿಯವರನ್ನ ಪ್ರಶ್ನಿಸಿದ್ದಾರೆ. ಈ ಮಸೂದೆ ಮಂಡಿಸಲು ಇದೇ ಅಧಿವೇಶನದಲ್ಲೇ ಅನುಮತಿ ಪಡೆದುಕೊಂಡಿತ್ತು. ಆದ್ರೆ ಮಂಗಳವಾರವೇ ಮಂಡನೆ ಮಾಡುವ ಬಗ್ಗೆ ವಿರೋಧ ಪಕ್ಷಗಳಿಗೆ ಸುಳಿವೇ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಸೂದೆಯನ್ನು ಮಂಡಿಸಿದ ಮಾತ್ರಕ್ಕೆ ಇದು ಅನುಮೋದನೆಯಾಗಿದೆ ಎಂದು ಅರ್ಥವಲ್ಲ. ಶ್ರೀಕ್ಷೇತ್ರ ಧರ್ಮಸ್ಥಳ ನಮ್ಮ ನಂಬಿಕೆ, ಜೈನ ಧರ್ಮದವರು ದೇವಾಲಯವನ್ನು ಮುನ್ನಡೆಸುತ್ತಿದ್ದಾರೆ. ಅದೇ ಧರ್ಮದವರಾದ ವೀರೇಂದ್ರ ಹೆಗ್ಗಡೆಯವರು ಅಲ್ಲಿನ ಧರ್ಮಾಧಿಕಾರಿಗಳು. ಅವರು ಮಂಜುನಾಥಸ್ವಾಮಿಯ ಧರ್ಮಾಧಿಕಾರಿಗಳು. ಅವರು ಎಂದಾದರೂ ಜೈನ ಧರ್ಮಕ್ಕೆ ಮತಾಂತರಗೊಳ್ಳಿ ಎಂದು ಹೇಳಿದ್ದಾರಾ ಅಥವಾ ಅವರು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.