ಬೆಂಗಳೂರು: ಬಿಹಾರದ ಚುನಾವಣೆಗೆ ಬಿಹಾರದಲ್ಲಿ ಜೋರು ಮತ ಪ್ರಚಾರ ನಡೆಯುತ್ತಿದೆ. ಆದರೆ ಬೆಂಗಳೂರಿನಲ್ಲೂ ಬಿಹಾರದ ಮತ ಪ್ರಚಾರ ಜೋರಾಗಿದೆ. ಬಿಜೆಪಿ ನಾಯಕರು ಈಗಾಗಲೇ ಬಿಹಾರದ ಚುನಾವಣೆಗೆ ಕಾಂಗ್ರೆಸ್ ನಿಂದ ಕೋಟ್ಯಾಂತರ ಹಣ ಹೋಗಿದೆ ಎಂಬ ಆರೋಪ ಮಾಡ್ತಿದ್ದಾರೆ. ಈ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಬಿಹಾರಿಗಳನ್ನ ಭೇಟಿ ಮಾಡಿದ್ದಾರೆ. ಬಳಿ ಮತಯಾಚನೆ ಮಾಡಿದ್ದಾರೆ.
ಹೆಬ್ಬಾಳ ಸಮೀಪದ ಕೆಂಪಾಪುರ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಬಿಹಾರಿಗಳಿಗೆ ಸಮುದಾಯ ಭವನ ನಿರ್ಮಿಸಿ ಕೊಡುವ ಭರವಸೆ ನೀಡಿದರು. ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ನಡೆದಿದ್ದ ಬಿಹಾರಿಗಳು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಘೋಷಣೆ ಕೂಗಿರುವ ಪ್ರಸಂಗವೂ ಸಹ ನಡೆಯಿತು.
ನಾವೆಲ್ಲಾ ಭಾರತೀಯರು. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ರಾಷ್ಟ್ರಧ್ವಜ, ಸಂವಿಧಾನದ ರಕ್ಷಣೆಯಲ್ಲಿ ನಾವೆಲ್ಲಾ ಬದುಜುತ್ತಿದ್ದೇವೆ. ಬೇತೆ ಪಕ್ಷದವರು ದೆಹಲಿಯಲ್ಲಿ ಇರಬಹುದು. ಸ್ವಾತಂತ್ರ್ಯ ತಂದು ಕೊಟ್ಟಿದ್ದು ಯಾವ ಪಕ್ಷ? ಕಾಂಗ್ರೆಸ್ ಪಕ್ಷ ಅಂತ ಇತಿಹಾಸ ಇದೆ. ಗಾಂಧಿ ಕುಟುಂಬದ ತ್ಯಾಗ ಇದು. ಪ್ರಧಾನಿ ಆಗಲು ಸೋನಿಯಾ ಅವರು ಮನೆಬಾಗಿಲಿಗೆ ಬಂದಿತ್ತು. ಆರ್ಥಿಕ ತಜ್ಞರಿಗೆ ಅವಕಾಶ ಕೊಡಿ ಅಂತ ತ್ಯಾಗ ಮಾಡಿದ್ರು. ಇಂದಿರಾ ಗಾಂಧಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಕೇಳಿದ್ದಾರೆ.
ನಿಮ್ಮನ್ನ ಭೇಟಿ ಮಾಡುವ ದೊಡ್ಡ ಅವಕಾಶ ಸಿಕ್ಕಿದೆ. ಸಮುದಾಯ ಭವನ ಇದ್ಯಾ ಅಂತ ಕೇಳಿದೆ ಇಲ್ಲ ಅಂದ್ರು. ನನಗೆ ಮುಜುಗರ ಆಗುತ್ತೆ. ನೀವೆಲ್ಲರು ಒಂದು ವಾರ, 10 ದಿನ ಬಿಟ್ಟು ನನ್ನ ಭೇಟಿ ಮಾಡಿ. ನಿಮಗೆಲ್ಲ ಒಂದು ಸಮುದಾಯ ಭವನ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.






