ಕೋಡಿಶ್ರೀಗಳನ್ನ ಭೇಟಿ ಮಾಡಿದ ಡಿಕೆ ಶಿವಕುಮಾರ್ : ಸಿಎಂ ಆಗುವ ಕನಸಿಗೆ ಉತ್ತರ ಸಿಕ್ಕಿತಾ..?

1 Min Read

 

ಹಾಸನ: ಕೋಡಿಶ್ರೀಗಳು ಭವಿಷ್ಯ ನುಡಿದರೆ ಅದೆಲ್ಲವೂ ನಿಜವೇ ಆಗಿದೆ. ಹೀಗಾಗಿ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದರೆ ಎಲ್ಲರು ಕಿವಿಗೊಟ್ಟು ಕೇಳುತ್ತಾರೆ. ಮಳೆ, ಬೆಳೆ ಬಗ್ಗೆ ಭವಿಷ್ಯ ನುಡಿಯುತ್ತಾರೆ. ರಾಜಕೀಯದ ಬಗ್ಗೆಯೂ ಆಗಾಗ ಭವಿಷ್ಯ ನುಡಿಯುವ ಶ್ರೀಗಳು ಸಿಎಂ ಖುರ್ಚಿ, ಪಿಎಂ ಖುರ್ಚಿಯ ಬಗ್ಗೆಯೂ ಮಾತನಾಡುತ್ತಾರೆ. ಇದೀಗ ಡಿಕೆ ಶಿವಕುಮಾರ್, ಶ್ರೀಗಳನ್ನ ಭೇಟಿ ಮಾಡಿ ಕುತೂಹಲ ಕೆರಳಿಸಿದ್ದಾರೆ.

ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್, ಬಳಿಕ ಕೋಡಿ ಮಠಕ್ಕೆ ಹೋಗಿ ಶ್ರೀಗಳನ್ನ ಭೇಟಿಯಾಗಿ, ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಈ ಹಿಂದೆ ಕೋಡಿ‌ಶ್ರೀಗಳೆ ಸಿಎಂ ಸಿದ್ದರಾಮಯ್ಯ ಖುರ್ಚಿ ಗಟ್ಟಿ ಎಂದು ಹೇಳಿದ್ದರು. ಹಾಲು ಕೆಟ್ಟರು ಹಾಲುಮತ ಸಮುದಾಯ ಕೆಡುವುದಿಲ್ಲ ಎಂದಿದ್ದರು ಅಂದ್ರೆ ಸಿಎಂ ಸಿದ್ದರಾಮಯ್ಯ ಅವರು ತಾವಾಗಿಯೇ ಸಿಎಂ ಖುರ್ಚಿ ಬಿಟ್ಟುಕೊಡಬೇಕು ಇಲ್ಲವಾದರೆ ಬಲವಂತದಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು. ಇದೀಗ ಡಿಕೆ ಶಿವಕುಮಾರ್ ಅವರಿಗೆ ಯಾವ ಭರವಸೆ ಕೊಟ್ಟಿದ್ದಾರೆ ಅನ್ನೋದು ಕುತೂಹಲಕಾರಿಯಾಗಿದೆ.

ಯಾಕಂದ್ರೆ ಕೆಎನ್ ರಾಜಣ್ಣ ನೀಡಿರುವ ಸೆಪ್ಟೆಂಬರ್ ಕ್ರಾಂತಿ ಹೇಳಿಕೆ ಎಲ್ಲೆಡೆ ಬಾರೀ ಚರ್ಚೆಗೆ ಕಾರಣವಾಗಿದೆ. ಸೆಪ್ಟೆಂಬರ್ ನಲ್ಲಿ ಸಿಎಂ ಬದಲಾವಣೆಯಾಗಬಹುದು ಎಂಬ ಮಾತುಗಳೇ ಕೇಳಿ ಬರ್ತಾ ಇದೆ. ಈ ಬೆನ್ನಲ್ಲೇ ಕೋಡಿ ಶ್ರೀಗಳನ್ನ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾವೂ ಎಲ್ಲರ ಸಂಸ್ಕೃತಿಗೆ ಬೆಲೆ ಕೊಡಿತ್ತೇನೆ. ಧರ್ಮ, ದೇವರು, ನಮ್ಮ ಸಂಸ್ಕೃತಿ ಬಗ್ಗೆ ಗೌರವ ಅಪಾರವಾಗಿಯೆ ಇದೆ ಎಂದರು. ಇದೆ ವೇಳೆ ಕಾರ್ಯಕರ್ತರೆಲ್ಲ ಡಿಕೆಶಿ ಮುಂದಿನ ಸಿಎಂ ಎಂದು ಕೂಗುವಾಗ ಕಾರ್ಯಕರ್ತರಿಗೆ ಬೇಡ ಎಂಬ ಸೂಚನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *