ಬೆಂಗಳೂರು: ಪ್ರಧಾನಿ ಮೋದಿ ಯೋಗದಿನಾಚರಣೆಯ ಅಂಗವಾಗಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಬಂದು ಹೋಗುವ ರಸ್ತೆ ಮಾರ್ಗದಲ್ಲಿ ಹೊಸದಾಗಿ ಕಾಂಕ್ರಿಟ್ ಹಾಕಿ, ಸ್ವಚ್ಛಗೊಳಿಸಿದ್ದರು. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಬಂದಾಗ ಹಾಕಿದ್ದ ರಸ್ತೆ ರಸ್ತೆ ಕಿತ್ತು ಹೋದ ವಿಚಾರವಾಗಿ ಪ್ರತಿಕ್ರಿಯಿಸಿ, ಗುಂಡಿಗಳ ಬಗ್ಗೆ ಮಾಧ್ಯಮ ತೋರಿಸಿದೆ. ಜನರಿಗೆ ತೊಂದರೆ ಆದಾಗ ಗುಂಡಿ ಮುಚ್ಚಲಿಲ್ಲ. ಆದರೆ ಲೀಡರ್ ಬರ್ತಾರೆ ಅಂತ ಗುಂಡಿ ಮುಚ್ತಾ ಇದಾರೆ. ಜನರು ಮುಖ್ಯ ಅಲ್ಲ ಅನ್ನೋದು ಗೊತ್ತಾಗ್ತಾ ಇದೆ. ಅವರ ನಾಯಕರಿಗೆ ಏನೂ ಆಗಬಾರದು.
ರಸ್ತೆಯಲ್ಲಿ ಪಬ್ಲಿಸಿಟಿಗೆ ಬ್ಯಾನರ್ ಹಾಕಿದ್ರು. ಆದರೆ ಕಾಂಗ್ರೆಸ್ ನವರು ಹಾಕಿದ್ರೆ ನೋಟೀಸ್ ಕೊಡ್ತಾರೆ. ಬೆಂಗಳೂರಿನ ಕಮಿಷನರ್ ಅವರಿಗೆ ಯಾಕೆ ನೋಟೀಸ್ ಕೊಟ್ಟಿಲ್ಲ. ಪದ್ಮನಾಭನಗರದ ಕಚೇರಿಯಲ್ಲಿ ಹಾಕಿದ್ದಕ್ಕೆ ನೋಟೀಸ್ ಕೊಟ್ಟಿದ್ದಾರೆ. ಬಿಜೆಪಿ ನಾಯಕರಿಗೆ ಯಾಕೆ ನೋಟೀಸ್ ಕೊಟ್ಟಿಲ್ಲ ಹಾಗಾದ್ರೆ. ಕಾನೂನು ದುರುಪಯೋಗ ಮಾಡಿಕೊಂಡಿದ್ದಾರೆ ಇದರ ಬಗ್ಗೆ ಕಾನೂನು ಮೊರೆ ಹೋಗ್ತೀವಿ ಎಂದಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಪತನ ವಿಚಾರವಾಗಿ ಮಾತನಾಡಿ, ಇದನ್ನು ನೋಡಿದ್ರೆ ಗೊತ್ತಾಗ್ತಾ ಇದೆ. ಎಲ್ಲಿದೆ ಪ್ರಜಾಪ್ರಭುತ್ವ. ವಿರೋಧ ಪಕ್ಷ ಇರಲೇ ಬಾರದು ಅಂತ ಹೀಗೆ ಮಾಡ್ತಾ ಇದ್ದಾರೆ. ಜನ ಧ್ವನಿ ಮುಖ್ಯ ನೋಡೋಣ ಮುಂದೆ ಎಂದಿದ್ದಾರೆ.