ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಇಂದು. ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಮಾಡಿ ಇಂದಿರಾ ಗಾಂಧಿಯವರಿಗೆ ನಮನ ಸಲ್ಲಿಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಈ ಹಿಂದೆ ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸೋದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದೇ ವಿಚಾರವನ್ನ ತೆಗೆದುಕೊಂಡು ಬಿಜೆಪಿಯವರಿಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರನ್ನ ಬದಲಾಯಿಸಲು ಬಿಜೆಪಿಯವರು ಹೋಗಿದ್ರು. ಆದ್ರೆ ಹೆದರಿ ಸುಮ್ಮನಾಗಿದ್ದಾರೆ. ಅದನ್ನ ಮುಟ್ಟಬೇಕಿತ್ತು. ಕಾಂಗ್ರೆಸ್ ಏನು ಅಂತ ತೋರಿಸ್ತಾ ಇದ್ವಿ. ವಾಜಪೇಯಿ ಅವರು ಇಂದಿರಾ ಗಾಂಧಿಯವರನ್ನ ದುರ್ಗೆಗೆ ಹೋಲಿಸಿದ್ದರು. ಇಂದಿರಾ ಗಾಂಧಿಯವರಿದ್ದಾಗ ಸಾಕಷ್ಟು ಯೋಜನೆಗಳನ್ನ ತಂದಿದ್ದರು.
ಬಡತನ, ಜಾತಿ ವ್ಯವಸ್ಥೆಯನ್ನ ಸರಿ ಮಾಡಬೇಕು ಎಂದುಕೊಂಡಿದ್ದರು. ಈಗ ಕಾಂಗ್ರೆಸ್ ಬಿಟ್ಟು ಹೋಗಿರೋ ಗಿರಾಕಿಗಳೇ, ಇಂದಿರಾ ಕ್ಯಾಂಟಿನ್ ಅಂತ ಹೆಸರಿಡಿ ಅಂತ ಅರ್ಜಿ ತಂದಿದ್ದರು. ಮೊನ್ನೆ ಚುನಾವಣಾ ಪ್ರಚಾರದಲ್ಲೂ ಎಲ್ಲಾ ಕಡೆ ಇವರೇ ಇದ್ದರು. ಬಿಜೆಪಿಯವರು ಕಾಣಲೇ ಇಲ್ಲ ಎಂದು ಕಿಡಿಕಾರಿದ್ದಾರೆ.