ಕರ್ನಾಟಕ ಬಂದ್ ಗೆ ಕರೆ ಕೊಟ್ಟ ಡಿಕೆ ಶಿವಕುಮಾರ್

suddionenews
1 Min Read

ಬೆಂಗಳೂರು: ಕಾಂಗ್ರೆಸ್ ನಾಯಕರು ಈ ಬಾರಿ ಆಡಳಿತ ಪಕ್ಷದ ಭ್ರಷ್ಟಾಚಾರದ ವಿರುದ್ಧ ಬಾರೀ ಹೋರಾಟ ಮಾಡುತ್ತಿದ್ದಾರೆ. 40% ಕಮಿಷನ್ ವಿರುದ್ಧ ಅಭಿಯಾನವನ್ನು ಶುರು ಮಾಡಿದ್ದರು. ಪೇಸಿಎಂ ಅಭಿಯಾನವನ್ನು ಜೋರಾಗಿ ಶುರು ಮಾಡಿದ್ದರು. ಇದೀಗ ಮತ್ತೊಮ್ಮೆ ಬಿಜೆಪಿ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಲು ಸಜ್ಜಾಗಿದೆ.

ಮೊನ್ನೆಯಷ್ಟೇ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಲೋಕಾಯುಕ್ತ ಅಧಿಕಾರಿಗಳಿಗೆ ತಗಲಾಕಿಕೊಂಡಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಮನೆಯನ್ನು ತಡಕಾಡಿದಾಗ ಕೋಟಿ ಕೋಟಿ ಹಣ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಕರೆ ನೀಡಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಬಗ್ಗೆ ಮಾತನಾಡಿದ್ದು, ಬಿಜೆಪಿಯ ಭ್ರಷ್ಟಾಚಾರ ವಿರೋಧಿಸಿ ಬಂದ್ ಗೆ ಕರೆ ನೀಡಲಾಗಿದೆ. ಮಾರ್ಚ್ 9ರಂದು ಬಂದ್ ಮಾಡಲಾಗುತ್ತದೆ. ಈ ರಾಜ್ಯವನ್ನು ಭ್ರಷ್ಟಚಾರ ಮುಕ್ತ ಮಾಡುವುದಕ್ಕೆ ಈ ಕರೆ ನೀಡಲಾಗುತ್ತಿದೆ. ಶಾಲಾ – ಕಾಲೇಜು, ಆಸ್ಪತ್ರೆ, ಸರ್ಕಾರಿ ಸೇವೆ ಬಿಟ್ಟು ಉಳಿದವರೆಲ್ಲಾ ಈ ಬಂದ್ ಬೆಂಬಲ ಸೂಚಿಸುವಂತೆ ಸೂಚನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks