ಇವರ್ಯಾಕೆ ಬಟ್ಟೆಗಳನ್ನು ಹಾಕ್ತಾರೆ? ಬನಿಯನ್, ಚಡ್ಡಿ ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ : ಡಿಕೆಶಿ

 

ಬೆಂಗಳೂರು: ಸ್ಕೂಲ್ ಮಕ್ಕಳಿಗೆ ಬಟ್ಟೆ, ಶೂಗಳನ್ನು ನೀಡುವ ಬಗ್ಗೆ ಶಿಕ್ಷಣ ಸಚಿವರ ಹೇಳಿಕೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಶಿಕ್ಷಣ ಸಚಿವರ ಹೇಳಿಕೆ ನಿಜವಾಗಲೂ ರಾಜ್ಯ ತಲೆ ತಗ್ಗಿಸುವ ಹೇಳಿಕೆ. ಹಳ್ಳಿ ಶಾಲೆಯಲ್ಲಿ ಓದಿದವರು ದೊಡ್ಡ ಸ್ಥಾನಕ್ಕೆ ಹೋಗಿದ್ದಾರೆ. ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಬಟ್ಟೆಗಳನ್ನು ಕೊಡಿಸಲು, ಒಳ್ಳೆಯ ಶಾಲೆಯಲ್ಲಿ ಓದಿಸಲು ದುಡಿಯುತ್ತಾರೆ. ಅದಕ್ಕೆ ಸರ್ಕಾರವೂ ಸಹ ಶೂ, ಬಟ್ಟೆಗಳನ್ನು ಕೊಡುವ ಕಾರ್ಯಕ್ರಮ ಮಾಡಿದೆ. ಆದರೆ ಶಿಕ್ಷಣ ಸಚಿವರು ಇದಕ್ಕೆ ವಿರುದ್ಧ ಹೇಳಿಕೆ ನೀಡಿದ್ದಾರೆ. ಇವರ್ಯಾಕೆ ಬಟ್ಟೆಗಳನ್ನು ಹಾಕ್ತಾರೆ..?. ಇವರು ಬನಿಯನ್, ಚಡ್ಡಿ ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ ಎಂದಿದ್ದಾರೆ.

ತಳ್ಳಿ ಬಿಡ್ತಾರೆ ಇವರನ್ನು. ಸಚಿವರ ಹೇಳಿಕೆ ಅಗೌರವದಿಂದ ಕೂಡಿದೆ. ನಾನು ಸಿಎಂ ಮತ್ತು ಸಚಿವರಿಗೆ ಹೇಳ್ತೇನೆ. ನಿಮ್ಮ ಬಳಿ ಹಣ ಇಲ್ಲದಿದ್ದರೆ ಹೇಳಿ. ಕಾಂಗ್ರೆಸ್ ನವರು ಭಿಕ್ಷೆಬೇಡಿ ಬಟ್ಟೆಗಳನ್ನು ಕೊಡ್ತಾರೆ. ನೊಂದ‌ ಮಕ್ಕಳ, ಪೋಷಕರ ಗೌರವ ಕಾಪಾಡಲು ಕಾಂಗ್ರೆಸ್ ಬದ್ಧವಾಗಿದೆ. ಇದು ರಾಜ್ಯದ ಎಲ್ಲಾ‌ ಮಕ್ಕಳ ಸ್ವಾಭಿಮಾನದ ವಿಚಾರ. ನಮ್ಮ‌ಮಕ್ಕಳ ಬದುಕಿನ ವಿಚಾರ. ನೀವು ಮಕ್ಕಳನ್ನು ಅಗೌರವದಿಂದ ಕಾಣ್ತಾ ಇದ್ದೀರಾ. ಸರ್ಕಾರ ಮೊದಲಿನಿಂದಲೂ ಶಾಲಾ ಮಕ್ಕಳಿಗೆ ಬಟ್ಟೆ, ಶೂ, ಶಾಕ್ಸ್ ಕೊಡ್ತಾ ಬಂದಿದ್ದೇವೆ. ಕಾಂಗ್ರೆಸ್ ನಿಂದ ಒಂದು ಕಾರ್ಯಕ್ರಮ ಹಾಕಿಕೊಳ್ಳುತ್ತೇವೆ. ಎಲ್ಲಾ ತಾಲ್ಲೂಕು ಜಿಲ್ಲೆಯಲ್ಲಿ ಭಿಕ್ಷೆ ಎತ್ತಿ, ಮಕ್ಕಳಿಗೆ ಬಟ್ಟೆಗಳನ್ನು ಕೊಡ್ತೇವೆ. ಕಾರ್ಯಕರ್ತರಿಗೆ ನಾವು ಹೇಳ್ತೇನೆ. ಎಲ್ಲಾ ಮಕ್ಕಳಿಗೆ ಬಟ್ಟೆಗಳನ್ನು ಕೊಡಲು, ಶೂ, ಶಾಕ್ಸ್ ಕೊಡಲು ಹೇಳ್ತೇನೆ ಎಂದಿದ್ದಾರೆ.

 

೧೮ ರಂದು ಶಾಸಕರ ಸಭೆ ಇದೆ. ಎಐಸಿಸಿ ಕೆಲವು
ಕೊಟ್ಟಿದ್ದಾರೆ. ನಿನ್ನೆ ಪದಾಧಿಕಾರಿಗಳು ಬಂದಿದ್ದರು. ಮುಂದೆ ಸಂಘಟನೆಯ ವಿಚಾರದಲ್ಲಿ ನಿನ್ನೆ ಸಿದ್ದರಾಮಯ್ಯ ಅವರು ಸಹ ಕೆಲವು ಸಲಹೆ ನೀಡಿದ್ದಾರೆ. ನಿನ್ನೆ ಸಭೆಯ ಕೆಲ ಮಾಹಿತಿ ಯನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಬೇಕಿತ್ತು. ಬೆಳಿಗ್ಗೆ ಮನೆಗೆ ತಿಂಡಿಗೆ ಬರಲು ಹೇಳಿದ್ದರು. ಅದಕ್ಕೆ ಬಂದು ಒಂದು ಗಂಟೆ ಚರ್ಚೆ ಮಾಡಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *