ದೊಡ್ಡ ಲೀಡರ್ಸ್ ಮೊದಲು ಅವರ ಮೂತಿ ಒರೆಸಿಕೊಳ್ಳಲಿ : ಡಿಕೆ ಶಿವಕುಮಾರ್ ವ್ಯಂಗ್ಯ

 

ಬೆಂಗಳೂರು: ಸಿದ್ದರಾಮೋತ್ಸವ ಸಮಾವೇಶ ವಿಚಾರವಾಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಸಿದ್ಧರಾಮೋತ್ಸವ ಸಮಾವೇಶಕ್ಕೆ ಎಲ್ಲಾ ಹೋಗಬೇಕು ಅಂತ ತಿರ್ಮಾನ ಮಾಡಿದ್ದೇವೆ. ಇದು ನಮ್ಮ‌ಪಕ್ಷದ ನಾಯಕರ ಕಾರ್ಯಕ್ರಮ. ನಮ್ಮ‌ ಪಕ್ಷದ ರಾಹುಲ್ ಗಾಂಧಿ‌ ಸಹ ಬರಲಿದ್ದಾರೆ. ಇದು ನಮ್ಮ ಪಕ್ಷದ ಕಾರ್ಯಕ್ರಮ. ಪಕ್ಷದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಮಾವೇಶ ಪಕ್ಷಾತೀತವಾದ ಕಾರ್ಯಕ್ರಮ ಅನ್ನೋ ಸ್ವಾಗತ ಸಮಿತಿ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ ಡಿಕೆ ಶಿವಕುಮಾರ್.

ಜಡ್ಜ್ ಮುಂದೆ ಎಲ್ಲರ ಹೆಸರು ಹೇಳಲು ಸಿದ್ದ ಎಂದು ಅಮೃತ ಪೌಲ್ ಹೇಳಿರುವ ವಿಚಾರವಾಗಿ ಮಾತನಾಡಿದ ಡಿ.ಕೆ ಶಿವಕುಮಾರ್, ಫ್ರೀ ಹ್ಯಾಂಡ್ ಫೇರ್ ಆಗಿ ತನಿಖೆಯಾಗಬೇಕು. ಯಾರ್ಯಾರು ಭಾಗಿಯಾಗಿದ್ದಾರೆಂದು ಹೇಳಬೇಕು. ರಾಜ್ಯದ ಹಿತಕ್ಕಾಗಿ ಹೇಳಬೇಕು ಎಂದು ನಾವು ಒತ್ತಾಯ ಮಾಡಿದ್ದೇವೆ. ಸಂಜೆ ಸಾಂಕೇತಿಕವಾಗಿ ಧರಣಿ ನಡೆಸಲಿದ್ದೇವೆ. ಕೇವಲ ಅಮೃತ್ ಪೌಲ್ ಹೇಳಿಕೆ ಮಾತ್ರವಲ್ಲ. ಅರೆಸ್ಟ್ ಆದ ಎಲ್ಲರ ಹೇಳಿಕೆಗಳೂ ಮುಖ್ಯ.

ಯಾರಿಗೆ ಎಷ್ಟು ಹಣ‌ಕೊಟ್ಟಿದ್ದಾರೆ?. ಯಾರು ಫೋನ್ ಮಾಡಿ ಬಿಡಿಸಿದ್ರು? ಮತ್ತೆ ಯಾಕೆ ಸರೆಂಡರ್ ಮಾಡಿಸಿದ್ರು?. ಹಣ ವಾಪಸ್ ಕೊಡಿಸ್ತೇನೆ ಅಂತಾ ಹೇಳಿದ್ದಾರೆ. ಇವರೆಲ್ಲರ‌ ಹೆಸರು ಇದೆ, ನನಗೆ ಮಾಹಿತಿ ಇದೆ. ಸಮಯ ಬಂದಾಗ ಮಾತನಾಡ್ತೇನೆ. ಪರೋಕ್ಷವಾಗಿ ಸಚಿವ ಅಶ್ವಥ್ ನಾರಾಯಣ್ ಕಡೆಗೆ ಡಿಕೆಶಿ ಮತ್ತೊಮ್ಮೆ ಬೊಟ್ಟು ಮಾಡಿದ್ದಾರೆ.

ಅಭಯ ಪಾಟೀಲ್ ಮೇಲೆ ದಾಳಿ ಮಾಡಲು ಸ್ಪೀಕರ್ ಅನುಮತಿ ಕೇಳಿದ ವಿಚಾರವಾಗಿ, ಜಮೀರ್ ದು ನೆಕ್ಸ್ಟ್ ಮಾಡಿ. ನನ್ನ ಮೇಲೆ ದಾಳಿ‌ ಮಾಡಿದ್ರಲ್ಲಾ. ಆಗ ಸ್ಪೀಕರ್ ಅನುಮತಿ ಕೇಳಿಲ್ಲ. ಸರ್ಕಾರದ ಅನುಮತಿ ಅಷ್ಟೇ ಎಂದು ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿ ಹವಾಲ ದಂಧೆಯಲ್ಲಿ ಭಾಗಿಯಾಗಿದ್ದರು ಎಂಬ ಬಿಜೆಪಿ ಟ್ವೀಟ್ ವಿಚಾರಕ್ಕೆ ಮೊದಲು ಅವರ ಲೀಡರ್, ದೊಡ್ಡ ಲೀಡರ್ಸ್ ಅವರ ಮೂತಿ ಕ್ಲೀನ್‌ ಮಾಡಿಕೊಳ್ಳಲಿ. ಮೂತಿ ಒರೆಸಿಕೊಳ್ಳುವ ಆಕ್ಷನ್‌ ಮಾಡಿ ವ್ಯಂಗ್ಯ ಮಾಡಿದ್ದಾರೆ ಡಿಕೆ ಶಿವಕುಮಾರ್.

Leave a Reply

Your email address will not be published. Required fields are marked *

error: Content is protected !!