ಮೈಸೂರು: ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ರಾಜ್ಯಕ್ಕೂ ಭಾರತ್ ಜೋಡೋ ಯಾತ್ರೆ ಆಗಮಿಸಿಲಿದೆ. ಭಾರತ್ ಜೋಡೋ ಯಾತ್ರೆ ಕುರಿತು ಬಿಜೆಪಿ ವ್ಯಂಗ್ಯವಾಡಿದ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೈಸೂರಿನಲ್ಲಿ ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ನಮಗೆ ಬಿಜೆಪಿಯ ಮಾರ್ಗದರ್ಶನ ಬೇಕಾಗಿಲ್ಲ. ನಾವೂ ಚುನಾವಣೆಯಲ್ಲಿ ಸೋತಿರಬಹುದು, ಆದರೆ ನಮ್ಮಲ್ಲಿ ಯಾರ ನಡುವೆಯೂ ಬಿರುಕು ಮೂಡಿಲ್ಲ. ಕಾಂಗ್ರೆಸ್ ಅಂತರಾಳ ಬಿಜೆಪಿಗೆ ಏನು ಗೊತ್ತು..? ಯಾರು ಬೇಕಾದರೂ, ಎಷ್ಟು ಬೇಕಾದರೂ ಟೀಕೆ ಮಾಡಬಹುದು. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದ್ದೆ ಇರುತ್ತದೆ. ಶ್ರಮವಿದ್ದಾಗ ಫಲ ಸಿಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆ ಶುರುವಾದಾಗ ಬಿಜೆಪಿ ಇದನ್ನು ವ್ಯಂಗ್ಯ ಮಾಡಿತ್ತು. ಇದು ಕಾಂಗ್ರೆಸ್ ಛೋಡೋ ಅಂತ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿತ್ತು.