ಬೆಂಗಳೂರು: ರಾಜ್ಯದ ಹಲವೆಡೆ ದೇವಸ್ಥಾನಗಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬ್ರೇಕ್ ಹಾಕಲಾಗಿದೆ. ಮುಸ್ಲಿಂ ರು ಮೂರ್ತಿ ಪೂಜೆ ಮಾಡಲ್ಲ ಅವರಿಗ್ಯಾಕೆ ನಮ್ಮ ದೇವಸ್ಥಾನದ ಬಳಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಕೋರ್ಟ್ ತೀರ್ಪನ್ನೇ ಧಿಕ್ಕರಿಸಿ ಬಂದ್ ಮಾಡಿದ್ರು. ಅವರಿಗ್ಯಾಕೆ ಅವಕಾಶ ನೀಡಬೇಕು ಎಂದು ಭಜರಂಗದಳದ ಮುಖಂಡರು ವಾದ ಮಾಡುತ್ತಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಅವರಿಗೂ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಇನ್ನು ರಾಜಕಾರಣಕ್ಕಾಗಿ ಬೇಕಾದಷ್ಟು ತರುತ್ತಾರೆ. ಆದ್ರೆ ರಾಜಕಾರಣವನ್ನ ಇದರಲ್ಲೆಲ್ಲಾ ಮಾಡುವ ಬದಲು, ರೈತರಿಗೆ ಅನುಕೂಲವಾಗುವಂತದ್ದನ್ನ ಮಾಡಲಿ. ಬೆಳೆಗೆ ಬೆಂಬಲ ಕೊಡುವುದಾಗಲೀ ಮಾಡಲ್ಲ. ಇಂಥದ್ದು ಮಾಡ್ತಾರೆ.
ಚರ್ಚ್, ಮಸೀದಿ ಮುಂದೆ ಹಿಂದುಗಳು ಯಾರು ಕೆಲಸವೇ ಮಾಡಬಾರದಾ..? ಮಾಡೋದು ಇಲ್ವಾ..? ಹಿಂದುಗಳಿಗೆ ಅವಕಾಶ ಕೊಡದೆ ಹೋದರೆ ತೊಂದರೆ ಆಗುತ್ತೆ ಅಲ್ವಾ. ಯಾರು ಯಾರಿಗೂ ತೊಂದರೆ ಕೊಡಬಾರದು ಎಂದು ಸಲಹೆ ನೀಡಿದ್ದಾರೆ.

