ಬೆಂಗಳೂರು: ಎಂ ಆರ್ ಸೀತಾರಾಮ್ ಪ್ರತ್ಯೇಕ ಸಭೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಅವರು ಸಿನಿಯರ್ ಇದ್ದಾರೆ ಸಭೆ ನಡೆಸಬಾರದಿತ್ತು ಸಭೆ ನಡೆಸಿದ್ದಾರೆ. ಅವರು ಶಾಸಕರಾಗಿದ್ರು, ಮಂತ್ರಿಯಾಗಿದ್ರು. ಮಲ್ಲೇಶ್ವರ ಟಿಕೆಟ್ ಕೊಟ್ಟಿದ್ರು ಸ್ಪರ್ಧೆ ಮಾಡೋದಿಲ್ಲ ಅಂದ್ರು ಎಂದಿದ್ದಾರೆ.
ಎರಡು ಎಮ್ ಎಲ್ ಸಿ ಸೀಟ್ ಇತ್ತು ನಜೀರ್ ಅವರಿಗೆ ಕೊಟ್ವಿ. ಟಿವಿಗಳಲ್ಲಿ ಬಡಿದಾಡುತ್ತಿದ್ದ ಯಾದವ್ ಗೆ ಕೊಟ್ಟಿದ್ದೇವೆ. ರಾಜ್ಯಸಭೆ ಇದ್ದದ್ದನ್ನು ಖರ್ಗೆಯವರಿಗೆ ಕೊಟ್ಟಿದ್ದೀವಿ. ಈಗ ಜೈ ರಾಮ್ ಅವರಿಗೆ ಕೊಟ್ಟಿದ್ದೇವೆ. ಇದರಲ್ಲಿ ತಪ್ಪು ಏನಾದ್ರು ಇದ್ರೆ ಹೇಳಿ ಎಂದಿದ್ದಾರೆ.
ಸಭೆ ನಡೆಸಿದ್ದಕ್ಕೆ ಅವರ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್, ಅದನ್ನ ಪಕ್ಷದ ಶಿಸ್ತು ಸಮಿತಿ ನೊಡಿಕೊಳ್ಳುತ್ತೆ. ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ. ನಮ್ಮ ಪಕ್ಷ ಅವರನ್ನು ಗುರುತಿಸಿದೆ ಎಂಎಲ್‌ಎ ಮಾಡಿದೆ ಮಾಡಿದೆ ಒಳ್ಳೆಯದ್ದೆ ಆಗಲಿ ಎಂದಿದ್ದಾರೆ.
ಇನ್ನು ಅವರು ಬಿಜೆಪಿಯತ್ತ ತೆರಳುತ್ತಾರ ಅನ್ನೋ ಪ್ರಶ್ನೆಗೆ, ಕಾಂಗ್ರೆಸ್ ನಿಂದ ಅಷ್ಟೆಲ್ಲ ಹೆಸರು ಪಡೆದಿದ್ದಾರೆ ಅವರು ಯಾಕೆ ಬಿಜೆಪಿ ಬಗ್ಗೆ ಚಿಂತನೆ ಮಾಡ್ತಾರೆ. ನನಗೆ ಗೊತ್ತಿದೆ ಬಿಜೆಪಿಯವರು ಚಿಕ್ಕಬಳ್ಳಾಪುರದಿಂದ ಯಾರ್ ಯಾರನ್ನೆ ಕಳಿಸಿದ್ರು ಯಾವ ಜನ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ಅವರ ಫ್ಯಾಮಿಲಿ ಡಿಗ್ನೈಪೈ ಫ್ಯಾಮಿಲಿ ಆ ರೀತಿಯ ತಪ್ಪು ಮಾಡೋದಿಲ್ಲ. ಬಿಜೆಪಿಯವರು ಎಲ್ಲರನ್ನೂ ಸೆಳೆಯಲು ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.