ಬೆಂಗಳೂರು: ಟಿಪ್ಪು ಸಲ್ತಾನ್ ಹೆಸರನ್ನು ಪಠ್ಯದಿಂದ ತೆಗೆಯುವ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದ್ದಾರೆ. ಈ ದೇಶದ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ದೇಶದ ಇತಿಹಾಸದ ಜೊತೆಗೆ ಟಿಪ್ಪು ಸುಲ್ತಾನ್ ಹೆಸರಿದೆ. ಅಷ್ಟೇ ಅಲ್ಲ ರಾಷ್ಟ್ರಪತಿಯವರೇ ಟಿಪ್ಪು ಸುಲ್ತಾನ್ ರನ್ನ ಹೊಗಳಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ ನಮಗೆಲ್ಲಾ ಪಾಠ ಮಾಡಿದ್ದಾರೆ. ನಾವೂ ಆತುರವಾಗಿ ಯಾವುದೇ ನಿರ್ಧಾರ ಮಾಡಬಾರದು ಎಂದಿದ್ದಾರೆ.
ಗುತ್ತಿಗೆದಾರನಿಂದ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪದ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ಸಂಬಂಧ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ನನ್ನ ವಿರುದ್ಧ ಯಾರಾದ್ರೂ ಪತ್ರ ಬರೆದಿದ್ರಾ..? ದೂರು ಕೊಟ್ಟಿದ್ರಾ..? ನನ್ನ ವಿರುದ್ಧ ಯಾವುದಾದರೂ ದಾಖಲೆ ಇತ್ತಾ..? ನಾನು ಯಾವುದಾದರೂ ಕೊಲೆ ಅಥವಾ ರೇಪ್ ಮಾಡಿದ್ನಾ..? ಆದರು ಇವರು ನನ್ನ ಲನ್ನ ಜೈಲಿನೊಳಗೆ ಹಾಕಲಿಲ್ವಾ ಎಂದಿದ್ದಾರೆ.
ಈಗ ಈಶ್ವರಪ್ಪ ಬಗ್ಗೆ ಇರುವ ಆರೋಪದ ಬಗ್ಗೆ ತನಿಖೆಯಾಗಲಿ. ಬಿಎಸ್ವೈ ವಿರುದ್ಧ ರಾಜ್ಯಪಾಲರಿಗೆ ಈಶ್ವರಪ್ಪ ಪತ್ರ ಬರೆದಿದ್ದರು. ಶಾಸಕ ಯತ್ನಾಳ್, ವಿಶ್ವನಾಥ್ ಕೂಡ ಮಾತನಾಡಿದ್ದರು. ಅದಕ್ಕೆಲ್ಲಾ ಇವರು ಏನು ಉತ್ತರ ನೀಡುತ್ತಾರೆಂದು ಡಿಕೆಶಿ ಪ್ರಶ್ನಿಸಿದ್ದಾರೆ.