ಬೆಂಗಳೂರು: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಾಥ್ ಸರ್ಕಾರ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಪ್ರಯೋಗ ನಡೆಸುತ್ತಿದ್ದಾರೆ. ಇದೇ ಮಾದರಿಯನ್ನು ಚಿಕ್ಕಮಗಳೂರಿನಲ್ಲಿ ಪ್ರಯೋಗಿಸಲಾಗುತ್ತಿದೆ. ಗೋಮಾಂಸದಂಗಡಿಯನ್ನು ನೆಲಸಮಗೊಳಿಸಿದ್ದು, ಇವತ್ತು ನೋಟೀಸ್ ಗಳನ್ನು ಅಂಟಿಸಿ ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿದ್ದು, ನಾವೇ ಹೋಗಿ ಅಲ್ಲಿ ಮಲಗಿಕೊಳ್ತೀವಿ. ಕಾನೂನು ಎಂಬುದು ಇದೆ. ಉತ್ತರ ಪ್ರದೇಶದಲ್ಲಿ ಮಾಡಿದೆವು ಅಂತ ಕರ್ನಾಟಕದಲ್ಲಿ ಮಾಡಲು ಹೋದರೆ ಅವೆಲ್ಲಾ ಸಾಧ್ಯವಿಲ್ಲ ಎಂದಿದ್ದಾರೆ.
ಎಲ್ಲರನ್ನು ಹೆದರಿಸಲು, ಬೆದರಿಸಲು, ಮೈನಾರಿಟೀಸ್ ಕಿರುಕುಳ ಕೊಡಬೇಕೆಂಬ ಇವರ ಉದ್ದೇಶ. ಜಾತಿ ಮೇಲೆ ತೊಂದರೆ ಕೊಡಲು ಹೊರಟಿದ್ದಾರೆ. ಅದಕ್ಕೆ ಈ ರಾಜ್ಯದಲ್ಲಿ ಅವಕಾಶ ಸಿಗಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿಗೆ ಇಡಿ ನೋಟೀಸ್ ನೀಡಿರುವ ಬಗ್ಗೆ ಮಾತನಾಡಿ, ನನ್ನ ಮೇಲೆ ಎರಡು ಮೂರು ಕೇಸುಗಳಿವೆ. ನಮ್ಮ ನಾಯಕರುಗಳಿಗೆ ಅದು ಯಾಕೆ ಈ ರೀತಿಯ ಕಿರುಕುಳ ಕೊಡುತ್ತಾ ಇದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇದರ ಬಗ್ಗೆ ಅನೇಕ ಸಮಾಲೋಚನೆಗಳನ್ನು ನಾವೆಲ್ಲಾ ಆರಂಭಿಸಬೇಕಿದೆ. ಅದಕ್ಕಾಗಿಯೇ ತೀರ್ಥಹಳ್ಳಿ ಪ್ರವಾಸ ರದ್ದು ಮಾಡಿ, ಕೋರ್ಟ್ ಗೆ ಹಾಜರಾಗುತ್ತಿದ್ದೇನೆ. ಕುಳಿತುಕೊಂಡು ಸಮಾಲೋಚನೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.