ಬೆಂಗಳೂರು: ಎಲ್ಲಿಯೇ ಹೋದರೂ ಎಲ್ಲಿಯೇ ಬಂದರೂ ಶಾಸಕ ಜಮೀರ್ ಅಹ್ಮದ್, ಸಿದ್ದರಾಮಯ್ಯ ಅವರಿಗೆ ಆಪ್ತ ಎಂದೇ ಹೇಳಲಾಗುತ್ತೆ. ಈ ಬಗ್ಗೆ ಸಿದ್ದರಾಮಯ್ಯ ಉತ್ತರಿಸಿದ್ದು, ಜಮೀರ್ ಮಾತ್ರ ನಮ್ ಆಪ್ತ ಅಂತಿರಲ್ಲಾ, ಎಲ್ಲರು ನಮ್ ಆಪ್ತರೇ. ಪ್ರಿಯಾಂಕ್ ಕೂತಿದ್ದಾನೆ ಅವನು ನಮ್ ಆಪ್ತ. ಅಲ್ಲಿ ದಿನೇಶ್ ಕೂತಿದ್ದಾನೆ ಅವನು ನಮ್ ಆಪ್ತ. ಪಕ್ಷದಲ್ಲಿ ಎಲ್ಲರು ಆಪ್ತರೇ. ನೀವು ನಮ್ ಆಪ್ತರೇ. ಆಪ್ತರ ಪಟ್ಟಿಯಲ್ಲಿ ಅಧ್ಯಕ್ಷರ ಹೆಸರೇ ಬಿಟ್ರಲ್ಲ ಸರ್ ಎಂಬ ಪ್ರಶ್ನೆಗೆ, ನೀವು ನಮ್ ಆಪ್ತರೇ, ಯಾಕೆ ಅನುಮಾನ. ಎಲ್ಲರು ಆಪ್ತರೇ ಎಂದು ಎಷ್ಟೇ ಪ್ರಶ್ನಿಸಿದರೂ ಕೊನೆಗೂ ಡಿ ಕೆ ಶಿವಕುಮಾರ್ ಹೆಸರು ಮಾತ್ರ ಸಿದ್ದರಾಮಯ್ಯ ಹೇಳಲೇ ಇಲ್ಲ.
ಇನ್ನು ಜಮೀರ್ ಮನೆ ಮೇಲೆ ದಾಳಿ ವಿಚಾರವಾಗಿ ಮಾತನಾಡಿ, ಪಿಎಸ್ಐ ಹಗರಣ ಡೈವರ್ಟ್ ಮಾಡಲು ಇದನ್ನ ಮಾಡಿದ್ದಾರೆ ಅಂತಾ ಅನಿಸುತ್ತೆ. ಎಸಿಬಿ ದಾಳಿ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಇಡಿ ಆಧಾರದ ಮೇಲೆ ಎಸಿಬಿ ಹೇಗೆ ದಾಳಿ ಮಾಡಿದೆ. ಎಸಿಬಿ ಸಿಎಂ ಅಂಡರ್ ನಲ್ಲೇ ಬರುತ್ತೆ. ಇಡಿಗೂ, ಎಸಿಬಿಗೂ ಸಂಬಂಧವಿಲ್ಲ. ಯಾಕೆ ಮಾಡಿದ್ದಾರೋ ನನಗೆ ಗೊತ್ತಿಲ್ಲ.
ಪಿಎಸ್ಐ ಪರೀಕ್ಷೆ ನೇಮಕಾತಿ ಅಕ್ರಮ ಪ್ರಕರಣ್ ಹಿಂದೆ ಪ್ರಭಾವಿ ಸಚಿವರು, ಮುಖಂಡರು ಇದ್ದಾರೆ. ಪ್ರಕರಣವನ್ನ ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗ್ತಿರಾ ಎಂಬ ಪ್ರಶ್ನೆಗೆ, ಹೌದು ಪ್ರಕರಣವನ್ನ ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗ್ತೀವಿ. ಅವರ ಕಾಲದಲ್ಲೂ ಆಗಿತ್ತು ಅಂದ್ರೆ. ಆಗ ನೀನು ಏನು ಮಾಡ್ತಿದ್ದಪ್ಪಾ. ಪ್ರತಿಪಕ್ಷದಲ್ಲಿ ನೀವು ಕುಳಿತಿರಲಿಲ್ವೇ?. ಭ್ರಷ್ಟಾಚಾರ ಆಗಿದ್ದರೆ ಧ್ವನಿ ಎತ್ತಬೇಕಿತ್ತು. ಯಾಕೆ ಆಗ ಬಾಯ್ಮುಚ್ಚಿಕೊಂಡು ಕುಳಿತಿದ್ರಿ. ಆಗಲೇ ಧ್ವನಿ ಎತ್ತಬೇಕಿತ್ತು. ಯಾಕೆ ನೀವು ಆಗ ಎತ್ತಲಿಲ್ಲ. ಈಗ ಸುಮ್ಮನೆ ಸಮರ್ಥನೆ ಮಾಡೋಕೆ ಹೇಳಬೇಡಿ. ಸಿಎಂ, ಗೃಹ ಸಚಿವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.