ಚಿತ್ರದುರ್ಗ,(ಅ.22) : ಚಿತ್ರದುರ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಯಾಗಿ ದಿವ್ಯ ಪ್ರಭು ಅವರು ಇಂದು(ಶನಿವಾರ) ಅಧಿಕಾರ ವಹಿಸಿಕೊಂಡರು.
ಈ ಮೊದಲು ಜಿಲ್ಲಾಧಿಕಾರಿಯಾಗಿದ್ದ ಕವಿತಾ ಎಸ್. ಮನ್ನಿಕೇರಿ ಅವರಿಗೆ ಸರ್ಕಾರ ಸ್ಥಳ ನಿಯುಕ್ತಿಗೊಳಿಸಿಲ್ಲ.
2012ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ದಿವ್ಯ ಪ್ರಭು ಜಿ. ಆರ್. ಜೆ. ಅವರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ನಿನ್ನೆ (ಶುಕ್ರವಾರ) ಸರ್ಕಾರ ಆದೇಶಿಸಿತ್ತು.
ದಿವ್ಯ ಪ್ರಭು ಜಿ. ಆರ್. ಜೆ. ಅವರು ಮೂಲತಃ ತಮಿಳುನಾಡಿನವರು. ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿಯಲ್ಲಿ ಬಿಎಸ್ಸಿ ಪದವೀಧರರಾಗಿದ್ದಾರೆ. ಅವರು ನಿವೃತ್ತ ಮುಖ್ಯ ಶಿಕ್ಷಣಾಧಿಕಾರಿ ಜಿಜೆ ರಾಮಚಂದ್ರನ್ ಮತ್ತು ಚೆನ್ನೈನ ಸಮಾಜ ಕಲ್ಯಾಣ ಇಲಾಖೆಯ ಐಸಿಡಿಎಸ್‌ನಲ್ಲಿ ಅಧಿಕಾರಿ ಬಿವಿ ಜಯಂತಿ ಅವರ ಪುತ್ರಿ. ಮತ್ತು ಐಎಎಸ್ ಅಧಿಕಾರಿ ಡಾ ವಿ ರಾಮಪ್ರಸಾತ್ ಮನೋಹರ್ ಅವರ ಪತ್ನಿ.
2010 ರ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿಯಾದ ದಿವ್ಯಾ ಪ್ರಭು ಜಿಆರ್‌ಜೆ ಡೆಹ್ರಾಡೂನ್‌ನಲ್ಲಿ ಐಎಫ್‌ಎಸ್ ತರಬೇತಿಯ ನಂತರ, ಅವರು ಕರ್ನಾಟಕ ಕೇಡರ್‌ಗೆ ಆಯ್ಕೆಯಾದರು. 2012 ರಿಂದೀಚೆಗೆ ಭಟ್ಕಳ, ಸಿರ್ಸಿ ಮತ್ತು ಕಾರವಾರದಲ್ಲಿ ಸಹಾಯಕ ಸಂರಕ್ಷಣಾಧಿಕಾರಿಯಾಗಿ ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.