ಸುದ್ದಿಒನ್, ಚಿತ್ರದುರ್ಗ, (ಅ.31) : ಸಾಹಿತ್ಯ, ಸಮಾಜ ಸೇವೆ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ 14 ಮಂದಿ ಸಾಧಕರನ್ನು ಈ ಬಾರಿ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನವೆಂಬರ್ 1ರಂದು ಜಿಲ್ಲಾಡಳಿತದಿಂದ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಲಾಗುತ್ತಿದೆ.
ಕಲೆ, ಸಾಹಿತ್ಯ, ಜಾನಪದ, ಸಮಾಜ ಸೇವೆ, ಪರಿಸರ ಸಂರಕ್ಷಣೆ, ಕೃಷಿ, ಕ್ರೀಡೆ, ಛಾಯಾಗ್ರಹಣ, ಪತ್ರಿಕೋದ್ಯಮ, ವೈದ್ಯಕೀಯ, ಸಂಶೋದನೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲು ಅ.29ರಂದು ನಡೆದ ಆಯ್ಕೆ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಅಂತಿಮವಾಗಿ ಅ.30 ರಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.
ಅಕ್ಟೋಬರ್ 20 ರಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಅಂತಿಮವಾಗಿ ಅಕ್ಟೋಬರ್ 30 ರಂದು ಜಿಲ್ಲಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಈ ಕೆಳಕಂಡವರನ್ನು ಸನ್ಮಾನಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ.
ಸಾಹಿತ್ಯ ಕ್ಷೇತ್ರ
1. ಪ್ರೊ.ಎಚ್.ಲಿಂಗಪ್ಪ, ಚಿತ್ರದುರ್ಗ
2. ಧನಂಜಯ ಮೆಂಗಸಂದ್ರ, ಹೊಸದುರ್ಗ
3.ಡಾ.ಪಿ.ಬಿ.ಶಿವಣ್ಣ, ಚಳ್ಳಕೆರೆ
ಜಾನಪದ ಕ್ಷೇತ್ರ
1. ನೇಹಾ ಮಲ್ಲೇಶ್, ಚಿತ್ರದುರ್ಗ
ಕಲಾ ಕ್ಷೇತ್ರ
1.ಎಂ.ಬಿ.ಬೋರಯ್ಯ
ಪತ್ರಿಕೋದ್ಯಮ ಕ್ಷೇತ್ರ
1.ಎಸ್.ಬಿ.ರವಿಕುಮಾರ್, ಚಿತ್ರದುರ್ಗ
2. ಆಲೂರು ಹನುಮಂತರಾಯಪ್ಪ, ಹಿರಿಯೂರು
ಸಮಾಜ ಸೇವಾ ಕ್ಷೇತ್ರ
1.ಗಾಯತ್ರಿ ಶಿವರಾಮ್, ಚಿತ್ರದುರ್ಗ
2. ಈ. ಅರುಣ್ ಕುಮಾರ್, ಮಾಳಪ್ಪನಹಟ್ಟಿ
3. ಎಸ್.ಷಣ್ಮುಖಪ್ಪ, ಚಿತ್ರದುರ್ಗ
ವೈದ್ಯಕೀಯ ಕ್ಷೇತ್ರ
1.ಡಾ.ಎಂ.ಎಚ್.ರಘುನಾಥ ರೆಡ್ಡಿ, ಚಿತ್ರದುರ್ಗ
ಕ್ರೀಡಾ ಕ್ಷೇತ್ರ
1. ಎಂ.ಅನಿತಾ ಮಹಾಂತೇಶ್, ಚಿತ್ರದುರ್ಗ
2. ಪಿ.ಯಶಸ್, ಚಿತ್ರದುರ್ಗ
ಯೋಗ ಕ್ಷೇತ್ರ
1.ಎಸ್.ಆರ್.ಸಂತೋಷ್, ಮಲ್ಲಾಡಿಹಳ್ಳಿ