ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ

1 Min Read

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.15 : ಮಧ್ಯ ಕರ್ನಾಟಕದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ನಮ್ಮ ಜಿಲ್ಲೆಯ ಆರಾಧ್ಯ ದೈವ ಎಲ್ಲ ವರ್ಗ ಧರ್ಮದ ಜನ ತಮ್ಮದೇ ದೇವರು ಅಂತ ಭಕ್ತಿಯಿಂದ ಪೂಜಿಸುವ ಪುಣ್ಯ ಸ್ಥಳ ನಾಯಕನಹಟ್ಟಿ. ನಾನು ಸಹ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಸ್ವಾಮಿ ಆಶೀರ್ವಾದದಿಂದ ಈ ರಾಜ್ಯದಲ್ಲಿ ಮಂತ್ರಿಯಾಗುವ ಭಾಗ್ಯ ಭಗವಂತ ಕರುಣಿಸಿದ್ದಾನೆ.

ಇಡೀ ರಾಜ್ಯದಲ್ಲಿ ಬರೆದ ಛಾಯೆ ಆವರಿಸಿದೆ.
ಸರ್ಕಾರ ಸಮರೋಪಾದಿಯಲ್ಲಿ ಏನೇನು ಪರಿಹಾರ ಕಾರ್ಯವನ್ನು ಮಾಡುಬೇಕೋ ಅವೆಲ್ಲವನ್ನೂ ಮಾಡುತ್ತದೆ. ರೈತರ ಪರವಾಗಿ ನಮ್ಮ ಸರ್ಕಾರವಿದೆ. ಬರದ ಛಾಯೆ ಆವರಿಸದಂತೆ ನೋಡಿಕೊಳ್ಳುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಶಂಕರ್ ಯಾದವ್, ಮಹಮ್ಮದ್ ಯುಸೆಫ್, ತಾರಕೇಶ್, ಸುನಿಲ್ ಕುಮಾರ್, ದಳವಾಯಿ ರುದ್ರಮನಿ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಾರ್ಯನಿರ್ವಾಣಧಿಕಾರಿ  ಎಚ್. ಗಂಗಾಧರಪ್ಪ, ಸಿಬ್ಬಂದಿ ಎಸ್ ಸತೀಶ್, ಪಿಎಸ್ಐ ದೇವರಾಜ್, ಪೊಲೀಸ್ ಪೇದೆ ಅಣ್ಣಪ್ಪ, ಸೇರಿದಂತೆ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *