ರಾಜ್ಯದ ಸಚಿವ, ಶಾಸಕರಿಗೆ ಚಿನ್ನ ಲೇಪಿತ ಬ್ಯಾಡ್ಜ್ ವಿತರಣೆ : ಅದರ ಬೆಲೆ ಎಷ್ಟು ಗೊತ್ತಾ..?

1 Min Read

 

ಬೆಂಗಳೂರು: ರಾಜ್ಯ ಎಲ್ಲಾ ಶಾಸಕರು, ಸಚಿವರಿಗೆ ಇಂದು ಬ್ಯಾಡ್ಜ್ ವಿತರಣೆ ಮಾಡಲಾಗಿದೆ. ವಿಧಾನಸಭೆ ಸಚಿವಾಲಯದಿಂದ ರಾಜ್ಯದ 224 ಜನರಿಗೂ ಚಿನ್ನ ಲೇಪಿಯ, ಗಂಡುಬೇರುಂಡ ಬ್ಯಾಡ್ಜ್ ವಿತರಣೆ ಮಾಡಲಾಗಿದೆ. ಮುಂದಿನ ಅಧಿವೇಶನದಿಂದ ಎಲ್ಲಾ ಸದಸ್ಯರು ಈ ಬ್ಯಾಡ್ಜ್ ಧರಿಸಿಯೇ ಸದನಕ್ಕೆ ಹಾಜರಾಗಬೇಕು. ವಿಧಾನಸಭಡಗೆ ಬರುವವರೆಲ್ಲಾ ಶಾಸಕರ ರೀತಿಯೇ ಉಡುಪು ಧರಿಸಿ ಬರುತ್ತಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭೆಯಲ್ಲಿ ಎಲ್ಲಾ ಶಾಸಕರು ಬ್ಯಾಡ್ಜ್ ಧರಿಸಿ ಬರಬೇಕು ಎಂದು ಸ್ಪೀಕರ್ ಯು ಟಿ ಖಾದರ್ ಸೂಚನೆ ನೀಡಿದ್ದಾರೆ.

ಇನ್ನು ಈ ಬ್ಯಾಡ್ಜ್ ಗಳನ್ನು ಬೆಂಗಳೂರಿನ ಐ ಡ್ರೀಮ್ಸ್ ಟ್ರೆಂಡ್ ಅಂಡ್ ಈವೆಂಟ್ ಲಿಮಿಟೆಡ್ ಕಂಪನಿಯಿಂದ ತರಿಸಿಕೊಳ್ಳಲಾಗಿದೆ. ಒಂದೊಂದು ಚಿನ್ನ ಲೇಪಿತ ಬ್ಯಾಡ್ಜ್ ಗೆ 2,832 ರೂಪಾಯಿ ಕೊಟ್ಟು ಖರೀದಿ ಮಾಡಲಾಗಿದೆ. ಬ್ಯಾಡ್ಜ್ ಧರಿಸಲೇಬೇಕೆಂದಿರುವ ಯು ಟಿ ಖಾದರ್, ಎಲ್ಲಾ ಶಾಸಕರು ಬ್ಯಾಡ್ಜ್ ಧರಿಸಿದರೆ ಗಾರ್ಡ್ ಗಳಿಗೂ ಶಾಸಕರು ಯಾರೆಂಬುದನ್ನು ಕಂಡು ಹಿಡಿಯಲು ಅನುಕೂಲವಾಗುತ್ತದೆ. ಶಾಸಕರಿಗೆ ಒಂದೊಂದು ಕಿಟ್ ನೀಡಲಾಗಿದೆ. ಆ ಕಿಟ್ ನಲ್ಲಿ ಮೂರು ಚಿನ್ನ ಬೇರುಂಡ ಬ್ಯಾಡ್ಜ್ ಗಳನ್ನು ಇಡಲಾಗಿದೆ. ಒಂದು ಜಿಲ್ಲೆಗಳಲ್ಲಿ, ಇನ್ನೊಂದು ವಿಧಾನಸೌಧಕ್ಕೆ, ಮತ್ತೊಂದು ಪ್ರತಿದಿನದ ಬಳಕೆಗೆ ಸೂಚನೆ ನೀಡಲಾಗಿದೆ. ದೇಶದ ಎಲ್ಲೆ ಕಾರ್ಯಕ್ರಮಕ್ಕೆ ಹೋದರೂ ಈ ಬ್ಯಾಡ್ಜ್ ಗಳನ್ನು ಧರಿಸಲು ಸೂಚನೆ ನೀಡಲಾಗಿದೆ.

 

ಸ್ಪೀಕರ್ ಯುಟಿ ಖಾದರ್ ಅವರು ಇತ್ತಿಚೆಗೆ ಆಸ್ಟ್ರೇಲಿಯಾ ಮೇಯರ್ ಇಬ್ಬರನ್ನು ಭೇಟಿ ಮಾಡಿದ್ದರಂತೆ. ಅವರು ತಮ್ಮ ಸರ್ಕಾರದ ಬ್ಯಾಡ್ಜ್ ಅನ್ನು ಧರಿಸಿದ್ದರಂತೆ‌. ಚುನಾಯಿತ ಸದಸ್ಯರಿಗೆ ಅಲ್ಲಿನ ಸರ್ಕಾರ ಗೌರವ ಸೂಚ್ಯಂಕವಾಗಿ ಬ್ಯಾಡ್ಜ್ ಗಳನ್ನು ನೀಡುತ್ತದೆಯಂತೆ. ಹೀಗಾಗಿ ಇಲ್ಲಿಯೂ ಆ ಯೋಜನೆ ಜಾರಿಗೆ ತಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *