ಚಿತ್ರದುರ್ಗ, (ಮಾ.20) : ವಿಶ್ವ ಗುಬ್ಬಚ್ಚಿಗಳ ದಿನಾಚರಣೆ ಅಂಗವಾಗಿ “ಗುಬ್ಬಚ್ಚಿ ಬರ್ಡ್ ಫೆಸ್ಟಿವಲ್” ಎಂಬ ಕಾರ್ಯಕ್ರಮದ ಮೂಲಕ ಬೇಸಿಗೆಯಲ್ಲಿ ನೀರಿಗಾಗಿ ಪರಿತಪಿಸುವ ಪಕ್ಷಿಗಳಿಗಾಗಿ ನಗರದ ವಿವಿಧ ಬಡಾವಣೆಯ ಮನೆಗಳಿಗೆ ಗುಬ್ಬಚ್ಚಿ ಬರ್ಡ್ ಟ್ರಸ್ಟ್, ಪರಿವರ್ತನಾ ಫೌಂಡೇಶನ್ ಟ್ರಸ್ಟ್ ಸೇರಿದಂತೆ ಹಲವಾರು ಸಂಘಸಂಸ್ಥೆಗಳ ಕಾರ್ಯಕರ್ತರು ಅಂದಾಜು 1000 ಕ್ಕೂ ಹೆಚ್ಚು ಮಣ್ಣಿನ ತಟ್ಟೆಗಳನ್ನು ವಿತರಿಸಿದರು.
ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಗಾಂಧಿವೃತ್ತದಿಂದ ಬಿ.ಡಿ. ರಸ್ತೆಯ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿ ವೃತ್ತದ ವರೆಗೆ ಜಾಥಾ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಬ್ಬಚ್ಚಿ ಬರ್ಡ್ ಟ್ರಸ್ಟ್ ಮತ್ತು ಪರಿವರ್ತನ ಫೌಂಡೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಎಂ. ಕಾರ್ತಿಕ್‍ರವರು ವಹಿಸಿದ್ದು, ಸುಮಾರು 7- 8 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಆದರೆ ಈ ಬಾರಿ ಇವರ ಪಕ್ಷಿ ಕಾಳಜಿಯನ್ನು ಅರಿತು ರೋಟರಿ ಸಮೂಹ ಸಂಸ್ಥೆ, ಇನ್ನರ್ ವ್ಹೀಲ್ ಸಮೂಹ ಸಂಸ್ಥೆ, ವಾಸವಿ ವಿದ್ಯಾ ಸಂಸ್ಥೆ, ಆರ್ಯವೈಶ್ಯ ಸಂಘ, ವಾಸವಿ ಯುವಜನ ಸಂಘ, ಎಸ್.ಜೆ.ಎಂ. ಡೆಂಟಲ್ ಕಾಲೇಜು (ಎನ್.ಎಸ್.ಎಸ್.ವಿಂಗ್), ಎಸ್.ಜೆ.ಎಂ. ಲಾ ಕಾಲೇಜು, ರೆಡ್ ಕ್ರಾಸ್ ಸಂಸ್ಥೆ, ವಾಸವಿಕ್ಲಬ್ ಚಿತ್ರದುರ್ಗ ಫೋರ್ಟ್, ವಾಸವಿ ಮಹಿಳಾ ಸಂಘ, ರೆಡ್‍ಬುಲ್ಸ್ ನ ಎಲ್ಲಾ ಕಾರ್ಯಕರ್ತರು ಕಾರ್ತಿಕ್ ಅವರಿಗೆ ಸಾಥ್ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಿ. ಹರೀಶ, ಎಂ.ಜಿ. ನಾಗೇಶ್, ಶ್ರೀಮತಿ ಗಾಯತ್ರಿ ಶಿವರಾಂ, ರೊ|| ಚೆಲುವರಾಯ, ಶ್ರೀಮತಿ ಜ್ಯೋತಿ ಲಕ್ಷ್ಮಣ್, ಅವಿನಾಶ್, ಶ್ರೀನಿವಾಸ್, ಕಾರ್ತಿಕ್, ಡಾ|| ಫ್ರಾಂಕ್ ಆಂತೋನಿ, ರೊ|| ಮಧುಪ್ರಸಾದ್, ರೊ|| ವಿಶ್ವನಾಥ್ ಬಾಬು, ಶ್ರೀ ಸತ್ಯನಾರಾಯಣ ಶೆಟ್ಟಿ, ಶ್ರೀ ಸೋಮನಾಥ ಶೆಟ್ಟಿ, ಶ್ರೀಮತಿ ರಾಜೇಶ್ವರಿ ಸಿದ್ದರಾಂ, ಶ್ರೀಮತಿ ಸುಧಾ ನಾಗರಾಜ್, ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಭಾಗವಹಿಸಿದ್ದರು.