ವೀನೇಶ್ ಪೋಗಟ್ ಅನರ್ಹತೆ : ಭಾರತದ ಮುಂದಿನ ನಡೆ ಏನು..? ಪಿ.ಟಿ.ಉಷಾ ಜೊತೆಗೆ ಪ್ರಧಾನಿ ಚರ್ಚಿಸಿದ್ದೇನು..?

ಪ್ಯಾರೀಸ್ ನಡೆಯುತ್ತಿರುವ ಒಲಂಪಿಕ್ಸ್ ನ ಕುಸ್ತಿ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ವೀನೇಶ್ ಪೋಗಟ್ ಅನರ್ಹಗೊಂಡಿದ್ದಾರೆ. ಘಟಾನುಘಟಿಗಳನ್ನೇ ನೆಲಕ್ಕೆ ಕೆಡವಿ ಭೇಷ್ ಎನ್ನಿಸಿಕೊಂಡವರು ವಿನೇಶ್. ಒಂದೇ ಒಂದು ಪಂದ್ಯವನ್ನು ಸೋಲದ ಟೋಕಿಯೋ ಚಾಂಪಿಯನ್ ನನ್ನೇ ವಿನೇಶ್ ನಿನ್ನೆ ಸೋಲಿಸಿದ್ದರು. ಆದರೆ ನೂರು ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಅನರ್ಹಗೊಂಡರು. ಚಿನ್ನದ ಪದಕ ಗೆದ್ದು ಬರುವುದು ಗ್ಯಾರಂಟಿ ಎಂದೇ ಸಂಭ್ರಮಪಟ್ಟ ಭಾರತೀಯರಿಗೆ ಇದು ಅರಗಿಸಿಕೊಳ್ಳಲಾಗದ ತುತ್ತಾಗಿತ್ತು. ಇದೀಗ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಚರ್ಚೆ ನಡೆಸುತ್ತಿದ್ದಾರೆ.

ವಿನೇಶ್ ಪೋಗಟ್ ಆಡಿದ ಆಟಕ್ಕೆ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಆದರೆ ಫೈನಲ್ ಪ್ರವೇಶಿಸಿದಾಗಲೇ ಇಂಥ ಆಘಾತಕಾರಿ ಸುದ್ದಿ ಎಲ್ಲರಿಗೂ ಬೇಸರ ತರಿಸಿದೆ‌. ಈ ಬಗ್ಗೆ ಗಮನ ಹರಿಸಿದ ಪ್ರಧಾನಿ‌ ಮೋದಿ ಅವರು ಪಿ.ಟಿ ಉಷಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಪಿ.ಟಿ.ಉಷಾ ಅವರು ಇಂಡಿಯನ್ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆಯಾಗಿದ್ದಾರೆ. ಇರುವ ಮಾರ್ಗಗಳೇನು ಎಂಬುದೆಲ್ಲವನ್ನು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಯ ಬಗ್ಗೆ ಪಿ.ಟಿ.ಉಷಾ ಅವರಿಂದ ಪ್ರಧಾನಿ ಮೋದಿ ಅವರು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ವೀನೇಶ್ ಪೋಗಟ್ ಅವರ ಬೆಂಬಲಕ್ಕೆ ನಿಂತಿರುವ ಪ್ರಧಾನಿ ಮೋದಿ ಅವರು, ಏನೆಲ್ಲಾ ಸಾಧ್ಯವೋ ಅದೆಲ್ಲವನ್ನು ಮಾಡುವುದಕ್ಕೆ ಸೂಚನೆ‌ ನೀಡಿದ್ದಾರೆ. ಅಗತ್ಯ ಬಿದ್ದಲ್ಲಿ ಪ್ರಬಲ ಪ್ರತಿಭಟನೆ ನಡೆಸಲು ಸೂಚನೆ‌ ನೀಡಲಾಗಿದೆ.

ಇನ್ನು ಒಲಂಪಿಕ್ಸ್ ನಿಯಮದ ಅನ್ವಯದ ಪ್ರಕಾರ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಂತರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯಲ್ಲಿ ಅವಕಾಶವಿಲ್ಲ. ಹೀಗಾಗಿ ಭಾರತೀಯ ಒಲಂಪಿಕ್ಸ್ ಅಸೋಸಿಯೇಷನ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದೇ ಎಲ್ಲರ ಯೋಚನೆಯಾಗಿದೆ. ಆದರೆ ಪೋಗಟ್ ಅನರ್ಹತೆ ಮಾತ್ರ ಇಡೀ ದೇಶದ ಜನರಿಗೇನೆ ಶಾಕ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *