ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ, ಭೀಮಸಮುದ್ರ,
ಮೊ : 9880836505
ಸುದ್ದಿಒನ್, ಚಿತ್ರದುರ್ಗ, (ಜು.15) : ಮಕ್ಕಳಿಗೆ ವಿಜ್ಞಾನವೇ ಜಗತ್ತು. ವಿಜ್ಞಾನವಿಲ್ಲವೆಂದರೆ ಜಗತ್ತಿಲ್ಲ. ವಿಜ್ಞಾನ ಬಳಸಿಕೊಂಡು ಮೌಢ್ಯಗಳನ್ನು ಓಡಿಸಿ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಕಾರ್ಯಕಾರಿ ಸದಸ್ಯರಾದ ಹೆಚ್.ಎಸ್.ಟಿ. ಸ್ವಾಮಿ ಮಕ್ಕಳಿಗೆ ಕರೆ ನೀಡಿದರು.
ತಾಲ್ಲೂಕಿನ ಭೀಮಸಮುದ್ರದ ಶ್ರೀ ಭೀಮೇಶ್ವರ ಗ್ರಾಮಾಂತರ ಶಾಲೆಯಲ್ಲಿ ಕಿರುವಿಜ್ಞಾನ ಕೇಂದ್ರ ಹಾಗೂ ಕಂಪ್ಯೂಟರ್ ಕೊಠಡಿ ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭೀಮೇಶ್ವರ ಶಾಲೆಯ ಅಧ್ಯಕ್ಷರಾದ ಬಿ.ಟಿ. ಪುಟ್ಟಪ್ಪ ಮಾತನಾಡಿ ಶಾಲಾ ಮಕ್ಕಳು ಉತ್ತಮವಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು. ತಂದೆ ತಾಯಿ ಕಷ್ಟ ಪಟ್ಟು ನಿಮ್ಮನ್ನು ಓದಿಸುತ್ತಾರೆ. ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರಬೇಕೆಂದು ಮಕ್ಕಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ 8ನೇ ತರಗತಿ ಉಚಿತ ಸಮವಸ್ತ್ರ ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬಿಕೆ ಕಲ್ಲಪ್ಪ, ಸ್ಟೇಮ್ ಲರ್ನಿಂಗ್ ಸಂಸ್ಥೆಯ ಮಹೇಶ, ವೇದಾಂತ ಲಿಮಿಟೆಡ್‌ನ ರವಿ ಬಿಸಿಗುಪ್ಪ, ಹಾಗೂ ಭಾಗ್ಯಜ್ಯೋತಿ ಅವರು ಭಾಗವಹಿಸಿದ್ದರು.
ಇದೆ ಶಾಲೆಯಲ್ಲಿ ಸುಮಾರು ಐದು ವರ್ಷಗಳ ಕಾಲ ಮುಖ್ಯೋಪಾಧ್ಯರಾಗಿ ಕಾರ್ಯನಿರ್ವಹಿಸಿ ಮಂಜುನಾಥಾಚಾರಿ ಎಸ್. ಹಾಗೂ ಮುಖ್ಯೋಪಾಧ್ಯಯ ಪ್ರಕಾಶ್, ಸ್ಥಲಹಾ ಸಮಿತಿಯ ಸದಸ್ಯರಾದ ದೇವಕುಮಾರ್ ಹಾಗೂ ಶಾಲೆಯ ಎಲ್ಲ ನೌಕರವರ್ಗದವರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.