ಬೆಂಗಳೂರು: ಬಿಎಂಟಿಸಿಯಲ್ಲಿ ಚಾಲಕ/ಕಾರ್ಯನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ವಿನೋದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಿಪೋ 18ರಲ್ಲಿ ಕೆಲಸ ಮಾಡುತ್ತಿದ್ದ ವಿನೋದ್ ರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಅದೇ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹೋಗಲು ಹಣವಿಲ್ಲದೆ ರಾಯಚೂರು ಜಿಲ್ಲೆಯ ವಿರಾಪುರ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಮ್ಮನ್ನು ಕೆಲಸದಿಂದ ವಜಾ ಮಾಡಿರುವ ಬಗ್ಗೆ ಪ್ರಶ್ನಿಸಿ, ವಿನೋದ್ ಲೇಬರ್ ಕೋರ್ಟ್ ಗೆ ಹೋಗಿದ್ದರು. ಕೇಸ್ ಕೂಡ ನಡೆಯುತ್ತಿತ್ತು. ನಿನ್ನೆ ಕುಇಡ ವಿನೋದ್ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕೋರ್ಟ್ ಗೆ ಬರಲು ಹಣವಿಲ್ಲದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಮುಷ್ಕರದ ವೇಳೆ ವಜಾಗೊಂಡ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಈಗಾಗಲೇ ಸಾರಿಗೆ ಸಚಿವರೇ ಸೂಚನೆ ನೀಡಿದ್ದಾರೆ. ಆದರೆ ನಿಗಮ ಮಾತ್ರ ಇನ್ನು ಹಲವು ಕಾನೂನು, ಕಟ್ಟಳೆಯನ್ನೇ ಕಾರಣವಾಗಿ ನೀಡುತ್ತಿದೆ. ವಜಾಗೊಂಡ ನೌಕರರಲ್ಲಿ ಕೆಲವರು ಆತ್ಮಹತ್ಯೆ, ಹೃದಯಾಘಾತದಿಂದಲೂ ಸಾವನ್ನಪ್ಪಿದ್ದಾರೆ. ಇನ್ನು ಯಾರ್ಯಾರ ಪರಿಸ್ಥಿತಿ ಎಷ್ಟು ಕೆಟ್ಟದಾಗಿದಿಯೋ ಏನೋ. ಆದಷ್ಟು ಬೇಗ ನಿಗಮ ಕೂಡ ಸಚಿವರ ಆದೇಶದಂತೆ ವಜಾಗೊಂಡ ನೌಕರರನ್ನು ಕೆಲಸಕ್ಕೆ ತೆಗೆದುಕೊಂಡರೆ ಇನ್ನಷ್ಟು ಜನರ ಜೀವನ ಸುಧಾರಿಸಬಹುದು.