ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಡಿಸೆಂಬರ್. 27 : ಸಾಲ ಮನ್ನಾ ಆಸೆಗಾಗಿ ರೈತರು ಬರಗಾಲ ಬರಲಿ ಅಂತ ಕಾಯ್ತಾರೆ ಎಂಬ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ ಖಂಡನೀಯ ಸರ್ಕಾರ ಕೂಡಲೇ ದುರಹಂಕಾರಿ ಸಚಿವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಸಿದ ರೈತ ಸಂಘದ ಪದಾಧಿಕಾರಿಗಳು, ಅನ್ನದಾತರ ಬಗ್ಗೆ ಕಾಳಜಿ ಇಲ್ಲದ ಕರ್ನಾಟಕ ರಾಜ್ಯ ಸರ್ಕಾರದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ರವರು ರೈತರ ಬಗ್ಗೆ ಎಳ್ಳಷÀ್ಟು ಕಾಳಜಿ ಇಲ್ಲದ ಹಾಗೆ ಸಾಲ ಮನ್ನಾ ಆಸೆಗಾಗಿ ರೈತರು ಬರಗಾಲ ಬರಲಿ ಅಂತ ಕಾಯ್ತಾರೆ ಎಂಬ ಹೇಳಿಕೆ ರೈತ ವಿರೋಧಿ ನೀತಿಯಾಗಿದೆ ಯಾವುದೇ ರೈತರು ಸಾಲಮನ್ನಾಕ್ಕಾಗಿ ಬರಗಾಲ ಆಹ್ವಾನಿಸುವುದಿಲ್ಲ ಯಾವುದೇ ರಾಜ್ಯ ಸರ್ಕಾರ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ಗೊಬ್ಬರ ಯಾವುದನ್ನು ಇದುವರೆಗೂ ನೀಡಿರುವುದಿಲ್ಲ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಿರುವುದಿಲ್ಲ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪಿಸಿರುವುದಿಲ್ಲ ಅತಿವೃಷ್ಟಿ ಹಾಗು ಅನಾವೃಷ್ಟಿಯಿಂದ ರೈತರು ಪ್ರತಿಸಾರಿಯು ನಷ್ಠ ಅನುಭವಿಸುತ್ತಿರುತ್ತಾರೆ ಮಾರುಕಟ್ಟೆಯಲ್ಲಿ ಬೆಲೆ ಸಿಗದಿದ್ದಂತ ಪಕ್ಷದಲ್ಲಿ ತಾನು ಬೆಳೆದ ಹಣ್ಣು, ತರಕಾರಿ, ಇತರೆ ತೋಟದ ಬೆಳೆಗಳನ್ನು ತಿಪ್ಪೆಗೆ ಸುರಿದು, ರಸ್ತೆಗೆ ಸುರಿದು, ಸರ್ಕಾರದ ಬಳಿ ರೈತರು ನೋವನ್ನು ತೋಡಿಕೊಂಡ ಅನೇಕ ಸಾವಿರಾರು ಉದಾಹರಣೆಗಳು ಕಣ್ಮುಂದಿವೆ ಎಂದಿದ್ದಾರೆ.
ಇಂತಹ ಸಂದರ್ಭದಲ್ಲಿ ಸಚಿವರು ಆಸಂವಿಧಾನಿಕವಾಗಿ ಪದಬಳಕೆ ಮಾಡಿರುವುದು ನಾಡಿನ ಅನ್ನದಾತರಿಗೆ ಮಾಡಿರುವಂತಹ ಅಪಮಾನ ಕಳೆದ ಮುಂಗಾರಿನಲ್ಲಿ ತೀವ್ರ ಬರಗಾಲ ಆವರಿಸಿ ರಾಜ್ಯದ ಸುಮಾರು 212 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಿದೆ, ರೈತರು ನಷ್ಠ ಅನುಭವಿಸಿರುವ ರೂ 33,700 ಕೋಟಿ ನಷ್ಠವನ್ನು ರಾಜ್ಯದ ಮುಖ್ಯಮಂತ್ರಿಗಳು, ಮತ್ತು ಕಂದಾಯ ಸಚಿವರು ಪ್ರಧಾನಿ ಭೇಟಿಯಾಗಿ 17,900 ಕೋಟಿ ರೂಪಾಯಿ ಬೆಳೆ ನಷ್ಠ ಪರಿಹಾರ ನೀಡುವಂತೆ ಮನವಿ ಮಾಡಿದಂತ ಸಂದರ್ಭದಲ್ಲಿ ಈ ದುರಹಂಕಾರಿ ರೈತ ವಿರೋಧಿ, ಕರ್ನಾಟಕ ರಾಜ್ಯ ಸರ್ಕಾರದ ಸಕ್ಕರೆ ಸಚಿವ ಶಿವಾನಂದ ಪಾಟೀಲ್‍ರನ್ನು ಮುಖ್ಯಮಂತ್ರಿಗಳು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸುತ್ತಿದ್ದೇನೆ. ವಿಳಂಬ ಧೋರಣೆ ಕೈಗೊಂಡಲ್ಲಿ ಜಿಲ್ಲೆಯಾದ್ಯಂತ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾಧ ಭೂತಯ್ಯ, ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಭೂತಯ್ಯ, ಧನಂಜಯ, ಎಂ.ಬಿ.ತಿಪ್ಪೇಸ್ವಾಮಿ ಇತರರು ಇದ್ದರು.