ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ತಡೆ ಗಟ್ಟುವಿಕೆಯ ಕುರಿತು ಸಂವಾದ

1 Min Read

 

ಚಿತ್ರದುರ್ಗ, (ಅ.19) : ಚೈತನ್ಯ ಪದವಿ ಪೂರ್ವ ಕಾಲೇಜು ಮತ್ತು ರೋಟರಿ ಕ್ಲಬ್ ನ ಸಹಯೋಗದೊಂದಿಗೆ ಹದಿಹರಿಯದ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ತಡೆ ಗಟ್ಟುವಿಕೆಯ ಕುರಿತಾಗಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ​

ಈ ಕಾರ್ಯಕ್ರಮದಲ್ಲಿ ಹೆಸರಾಂತ ಮನೋರೂಗತಜ್ಞರಾದ ಡಾ|| ದೀಪಕ್ ಆರ್ ಎಸ್ ರವರು ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

​ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಮಧು ಪ್ರಸಾದ್ ರವರು ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ ಜಯಶ್ರೀ ಶಾ, ರೊ. ಮೈಲೇಶ್ ಕುಮಾರ್ ಹಾಗೂ ಇತರೆ ರೋಟರಿ ಕ್ಲಬ್ ನ ಗೌರವಾನ್ವಿತ ಸದಸ್ಯರುಗಳು ಭಾಗವಹಿಸಿದ್ದರು ಮತ್ತು ಕಾಲೇಜಿನ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

​ಈ ಕಾರ್ಯಕ್ರಮವನ್ನು ಉಪನ್ಯಾಸಕರಾದ ಕುಮಾರಿ ಜಾಹ್ನವಿ ಪಿ.ಎಸ್ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *