ಬೆಂಗಳೂರು: ರಾಜ್ಯದಲ್ಲಿ ವಾಡಿಕೆಯ ಮಳೆಯಾಗಿಲ್ಲ. ಕೃಷಿ ಬದುಕು ಹೇಗಪ್ಪ ಎಂದು ರೈತರು ಚಿಂತೆ ಮಾಡುತ್ತಿದ್ದಾರೆ. ಈಗಿರುವಾಗ ತಮಿಳುನಾಡು ಪದೇ ಪದೇ ಕಾವೇರಿ ನೀರಿಗಾಗಿ ಕ್ಯಾತೆ ತೆಗೆಯುತ್ತಲೆ ಇದೆ. ಕರ್ನಾಟಕದ ಜನರೇ ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಬಗ್ಗೆ ಯೋಚಿಸುವಂತೆ ಆಗಿದೆ. ಆದರೂ ತಮಿಳುನಾಡು ನೀರು ಬೇಕೆಂದು ಹಠ ಮಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರದ ಸರ್ವಪಕ್ಷ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ.
ಬುಧವಾರ ಬೆಳಗ್ಗೆ ಸರ್ವಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಾ ಇರೋದರ ಬಗ್ಗೆ ಸೇರಿದಂತೆ ರಾಜ್ಯದ ನೀರಿನ ಸಮಸ್ಯೆಯ ಬಗ್ಗೆಯೂ ಚರ್ಚೆ ನಡೆಯಲಿದೆ.
ಇನ್ನು ರಾಜ್ಯದಲ್ಲಿ ಘರ್ ವಾಪಾಸಿ ಸಾಕಷ್ಟು ಸದ್ದು ಮಾಡ್ತಾ ಇದೆ. ಕಾಂಗ್ರೆಸ್ ಬಿಟ್ಟು ಹೋದವರ ಜೊತೆಗೆ ಹೊಸಬರು ಜಾಯಿನ್ ಆಗ್ತಾರೆ ಎಂಬ ಮಾತು ಕೇಳಿ ಬರ್ತಾ ಇದೆ. ಅದರಲ್ಲೂ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಭರ್ಜರಿಯಾಗಿಯೇ ತಯಾರಿ ನಡೆಸುತ್ತಿದೆ. ಈ ಬಗ್ಗೆಯೂ ಮಾತನಾಡಿದ ಡಿಕೆ ಶಿವಕುಮಾರ್, ಪಾರ್ಟಿ ಹೈಕಮಾಂಡ್ ಹೇಳುವುದಕ್ಕೆ ಬದ್ಧ. ಯಾರೂ ಚರ್ಚೆ ಮಾಡುವ ವಿಚಾರ ಅಲ್ಲ. ಮುಂದಿನ ವಾರ ನಮ್ಮ ರಾಷ್ಟ್ರ ನಾಯಕರು ಬರ್ತಾರೆ ಅವರೇ ನಿರ್ಧಾರ ಮಾಡ್ತಾರೆ. ಯಾಕೆ ಅವರು ಅಧಿಕಾರಕ್ಕೆ ಬರುವುದಕ್ಕೋಸ್ಕರ ನಮ್ಮ ಸರ್ಕಾರ ಬೀಳಿಸಲಿಲ್ವಾ. ನಮ್ಮ ಪಕ್ಷಕ್ಕೂ ಯಾರೇ ಬಂದರೂ ಸ್ವಾಗತ ಎಂದಿದ್ದಾರೆ.