ನವದೆಹಲಿ: ಇತ್ತಿಚೆಗೆ ಅದಾನಿ ಗ್ರೂಪ್ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿದೆ. ಎಲ್ಐಸಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದೆ. ಈ ಕುರಿತ ಸಂಬಂಧ ಇಂದು ಕಲಾಪದಲ್ಲಿ ಅದಾನಿಯ ಷೇರು ಮಾರುಕಟ್ಟೆಯ ವಿಚಾರ ಬಾರೀ ಸದ್ದು ಮಾಡಿದೆ.
ಕಲಾಪದಲ್ಲಿ ವಿಪಕ್ಷಗಳು ಇದರ ತನಿಖೆಗೆ ಒತ್ತಾಯಿಸಿವೆ. ಸುಪ್ರಿಂಕೋರ್ಟ್ ನೇಮಿಸಿರುವ ಸಮಿತಿಯಿಂದ ಅದಾಗಿ ಗ್ರೂಪ್ ವಂಚನೆಯನ್ನು ತನಿಕೆ ನಡೆಸಬೇಕೆಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಈ ವೇಳೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಎಲ್ಐಸಿ, ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಕಂಪನಿಗಳು ಹೂಡಿಕೆ ಮಾಡುವ ಸಮಸ್ಯೆಗಳ ಬಗ್ಗೆ ನಿಯಮ 267 ಅಡಿಯಲ್ಲಿ ಚರ್ಚೆ ಮಾಡುವುದಕ್ಕೆ ನಾವು ಬಯಸಿದ್ದೇವೆ ಎಂದಿದ್ದಾರೆ.
ಸ್ಪೀಕರ್ ಸರ್ಕಾರದ ಒತ್ತಡಕ್ಕೆ ಮಣಿದು ನಮ್ಮ ನೋಟೀಸ್ ತಿರಸ್ಕಾರ ಮಾಡಿದ್ದಾರೆ. ನಾವೂ ಪ್ರಮುಖ ವಿಷಯಗಳನ್ನೇ ಪ್ರಸ್ತಾಪಿಸಿದರು ಅವುಗಳ ಚರ್ಚೆಗೆ ಸಮಯಾವಕಾಶ ನೀಡುವುದಿಲ್ಲ. ಸರ್ಕಾರ ಶ್ರೀಮಂತರ ಪರವಾಗಿದೆ. ಹೀಗಾಗಿಯೇ ಅವರ ತಪ್ಪುಗಳನ್ನು ಮರೆಮಾಚಲಾಗುತ್ತದೆ. ಆದರೆ ಸರ್ಕಾರ ಇರುವುದು ಶ್ರೀಮಂತರಿಗಾಗಿ ಅಲ್ಲ. ಕೋಟ್ಯಾಂತರ ಬಡವರಿಗಾಗಿ ಎಂಬುದನ್ನು ನಾವೂ ನೆನಪು ಮಾಡುತ್ತೇವೆ. ಅದಾನಿ ಗ್ರೂಪಿನ ಅನ್ಯಾಯದ ಸತ್ಯ ತಿಳಿಯಬೇಕು ಎಂದರೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದಿದ್ದಾರೆ.