ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವಂಬರ್. 07 : ಸಮವಸ್ತ್ರ ಮೈಮೇಲಿದ್ದರೆ ಶಿಸ್ತು ಮೂಡಿಸುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಧರ್ಮೆಂದ್ರಕುಮಾರ್ ಮೀನಾ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ, ಬಾಪೂಜಿ ಸಮೂಹ ಸಂಸ್ಥೆಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ವಿದ್ಯಾ ಸೋಪಾನ ಶಿಬಿರದಲ್ಲಿ ಧ್ವಜ ಚೀಟಿ ಬಿಡುಗಡೆಗೊಳಿಸಿ ಮಾತನಾಡಿದರು.
ದೇಶದ ಮಕ್ಕಳು ಆದರ್ಶ ನಾಗರೀಕರಾಗಲು ಶಿಸ್ತು ಮುಖ್ಯ. ಎನ್.ಸಿ.ಸಿ.ಯಲ್ಲೂ ಮಕ್ಕಳಿಗೆ ಸಮವಸ್ತ್ರವಿರುತ್ತದೆ. ಇದರಿಂದ ಜೀವನಲ್ಲಿ ಸಮಯಪ್ರಜ್ಞೆ ಬೆಳೆಯುತ್ತದೆಯಲ್ಲಿದೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕøತಿ ಕಲಿಯಬಹುದು ಎಂದು ಹೇಳಿದರು.
ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ ಸ್ಕೌಟ್ ಅಂಡ್ ಗೈಡ್ಸ್ ಮಕ್ಕಳನ್ನು ಸದಾ ಕ್ರಿಯಾಶೀಲವಾಗಿರಿಸುತ್ತದೆ. ಶಾಂತಿ, ಸಹನೆ, ತಾಳ್ಮೆ, ದೇಶಭಕ್ತಿ ಮೈಗೂಡಿಸಿ ಸೇವಾ ಮನೋಭಾವನೆ ಕಲಿಸುತ್ತದೆ. ಇಲ್ಲಿ ಪಾಲ್ಗೊಳ್ಳುವವರು ತೃತೀಯ ಸೋಪಾನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ನಂತರ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪಾಲ್ಗೊಳ್ಳುವ ಅವಕಾಶವಿರುತ್ತದೆ ಎಂದು ಸ್ಕೌಟ್ ಅಂಡ್ ಗೈಡ್ಸ್‍ನ ಮಹತ್ವ ತಿಳಿಸಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವಿರೇಶ್ ಮಾತನಾಡುತ್ತ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಿಂದ ರಾಜ್ಯದಲ್ಲಿ ಅತ್ಯುತ್ತಮವಾದ ಕೆಲಸಗಳಾಗುತ್ತಿವೆ. ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಕೊಂಡಜ್ಜಿ ಬಸಪ್ಪ ಇವರುಗಳ ಕೊಡುಗೆಯನ್ನು ಸ್ಮರಿಸಿದರು.
ಚಿಕ್ಕಂದಿನಿಂದಲೇ ಮಕ್ಕಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ತೊಡಗಿಕೊಂಡು ಶಿಸ್ತು, ಸಂಯಮ, ಸಮಯ ಪ್ರಜ್ಞೆ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಎಡಿಸಿ.ನಾಯ್ಡು, ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಸಹ ಕಾರ್ಯದರ್ಶಿ ಡಾ.ರಹಮತ್‍ವುಲ್ಲಾ, ಬಿ.ಇ.ಡಿ.ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಎಂ.ಆರ್.ಜಯಲಕ್ಷ್ಮಿ, ಅನಂತರೆಡ್ಡಿ, ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಪ್ರವೀಣ್ ವೇದಿಕೆಯಲ್ಲಿದ್ದರು.
ಭಾರತೀಯ ರೆಡ್‍ಕ್ರಾಸ್ ಜಿಲ್ಲಾ ಶಾಖೆಯ ವೈ.ಬಿ.ಮಹೇಂದ್ರನಾಥ್, ಶಿಕ್ಷಕರುಗಳಾದ ಸುರೇಶ್‍ಬಾಬು, ಯಲ್ಲಪ್ಪ, ಲಿಂಗರಾಜು, ಪಾಟೀಲ್, ಶೇಖರ್‍ನಾಯ್ಕ, ಪಿ.ವೈ.ದೇವರಾಜ್ ಪ್ರಸಾದ್, ತಿಪ್ಪೇಸ್ವಾಮಿ, ಚಮನ್‍ಬೀ, ಬಷೀರ, ಅರುಂಧತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.