ಮೇ.20 ರಂದು ವಿಕಲಚೇತನರ ಉದ್ಯೋಗ ಮೇಳ

ಚಿತ್ರದುರ್ಗ,(ಮೇ18) : ಸಮರ್ಥನಂ ಅಂಗವಿಕಲರ ಸಂಸ್ಥೆಯವರು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ದಾವಣಗೆರೆಯ ಶಿವಾಲಿ ಟಾಕೀಸ್ ಹತ್ತಿರದ ಬಿ ಬ್ಲಾಕ್‍ನ ದೇವರಾಜ್ ಅರಸ್ ಬಡಾವಣೆಯಲ್ಲಿರುವ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಮೇ 20ರಂದು ಬೆಳಿಗ್ಗೆ 9ಕ್ಕೆ ವಿಕಲಚೇತನರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪ್ಲೋಮಾ, ಮತ್ತು ಯಾವುದೇ ಪದವಿ ಹೊಂದಿರುವ 18 ರಿಂದ 35 ವಯೋಮಾನದೊಳಗಿನ ಆಸಕ್ತ ವಿಕಲಚೇತನರು ತಮ್ಮ ಬಯೋಡೇಟಾದ ಕನಿಷ್ಠ 3 ಪ್ರತಿಗಳು, ಕನಿಷ್ಠ 3 ಪಾಸ್‍ಪೋರ್ಟ್ ಅಳತೆಯ ಭಾವ ಚಿತ್ರಗಳು, ಶೈಕ್ಷಣಿಕ ಅರ್ಹತೆಗಳ ನಕಲು ಪ್ರತಿಗಳು, ಅಂಗವಿಕಲರ ಪ್ರಮಾಣ ಮತ್ತು ಆಧಾರ್ ಕಾರ್ಡ್‍ನೊಂದಿಗೆ  ಮೇ 20ರಂದು ಬೆಳಿಗ್ಗೆ 9 ಗಂಟೆಗೆ ಅಂಧ ಮಕ್ಕಳ ಸರ್ಕಾರಿ ಪಾಠ ಶಾಲೆ, ದೇವರಾಜ್ ಅರಸ್ ಬಡಾವಣೆ, ಬಿ ಬ್ಲಾಕ್, ಶಿವಾಲಿ ಟಾಕೀಸ್ ಹತ್ತಿರ, ದಾವಣಗೆರೆ-577002 ಇಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ವೀರಭದ್ರ ಪಾಟೀಲ್ 9480812121, [email protected],, ಸುಭಾμï 9449864693 canterhead  [email protected] ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ ಜೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!