ಹೆಚ್ಚು ಬಾಂಧವ್ಯ ಹೊಂದಿದ್ದ ಡೈರೆಕ್ಟರ್ ಅಪ್ಪು ಬಯೋಪಿಕ್ ಮಾಡ್ತಾರಾ..? ಫ್ಯಾನ್ಸ್ ಮಾತಿಗೆ ಏನಂದ್ರು ಸಂತೋಷ್ ಆನಂದ್ ರಾಮ್..?

1 Min Read

ಬೆಂಗಳೂರು : ಕರ್ನಾಟಕ ರತ್ನ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.. ಎಲ್ಲರ ನೆಚ್ಚಿನ ರಾಜಕುಮಾರ.. ಎಲ್ಲರ ಮೆಚ್ಚಿನ ಅಪ್ಪು.. ಬಾರದ ಲೋಕಕ್ಕೆ ಪಯಣಿಸಿದ್ದಾರೆ.. ಅವರ ದೇಹ ಇನ್ನಿಲ್ಲ ಅಂತ ಈಗಲೂ ಊಹೆ ಮಾಡಿಕೊಳ್ಳೋದಕ್ಕೂ ಕಷ್ಟವಾಗ್ತಿದೆ. ಅವರಿಲ್ಲ ಅನ್ನೋದಂತು ಸತ್ಯ.. 20 ದಿನಗಳೇ ಉರುಳಿದರೂ ಆ ಸತ್ಯ ಅರಗಿಸಿಕೊಳ್ಳಲು ಆಗ್ತಿಲ್ಲ. ಅವರ ಹಳೆ ಸಿನಿಮಾಗಳನ್ನ ಅಭಿಮಾನಿಗಳು ಮತ್ತೆ ಮತ್ತೆ ನೋಡ್ತಿದ್ದಾರೆ. ಅಪ್ಪು ಅವ್ರು ಮತ್ತೆ ಸಿನಿಮಾ ಮಾಡಲ್ಲ ಅಂದಾಗ ಆ ಕ್ಷಣ ಅವರ ವಿಡಿಯೋಗಳು ಮನಸ್ಸಿಗೆ ಚುಚ್ಚುವಂತೆ ಕಾಡುತ್ತಿದೆ.

ಇಷ್ಟು ದಿನ ಅವರ ಸಿನಿಮಾಗಳನ್ನ ಅಭಿಮಾನದಿಂದ ನೋಡಿ ಅವರ ಅಭಿನಯಕ್ಕೆ ಮನಸೋಲುತ್ತಿದ್ದೆವು. ಆದ್ರೆ ಈಗ ಅವರ ಸಿನಿಮಾಗಳನ್ನ ನೋಡುವಾಗ ಮನಸ್ಸಿಗೆ ಆಗುವ ಆಘಾತವೇ ಬೇರೆಯಾಗಿದೆ. ಮತ್ತೆಂದು ಇಂಥದ್ದೊಂದು ಅಭಿನಯ ನಮಗೆ ಸಿಗಲ್ಲ ಎಂದಾಗ ಮನಸ್ಸು ಭಾತವಾಗದೆ ಇರದು. ಅಭಿಮಾನಿಗಳು ಅಪ್ಪು ಅವರನ್ನ ಸದಾ ನಮ್ಮೊಂದಿಗೆ ಇರುವಂತೆಯೇ ಕಾಣಲು ಇಷ್ಟಪಡುತ್ತಿದ್ದಾರೆ. ಹೀಗಾಗಿಯೇ ಡೈರೆಕ್ಟರ್ ಬಳಿ ಮನವಿ ಮಾಡಿದ್ದಾರೆ.

ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ರಾಜ್‍ಕುಮಾರ್ ನಡುವೆ ಒಂದೊಳ್ಳೆ ಬಾಂಧವ್ಯವಿತ್ತು. ಇಬ್ಬರು ಹ್ಯಾಟ್ರಿಕ್ ಬಾರಿಸೋ ಖುಷಿಯಲ್ಲಿದ್ದರು. ಅಪ್ಪು ಜೊತೆ ಮೂರನೇ ಸಿನಿಮಾ ಮಾಡೇ ಮಾಡ್ತೀನಿ ಅಂತ ತಯಾರಿ ಮಾಡಿಕೊಂಡಿದ್ದರು. ಆದ್ರೆ ವಿಧಿಗೆ ಆ ಹ್ಯಾಟ್ರಿಕ್ ಗೆಲುವು ಇಷ್ಟವಾಗಲಿಲ್ಲ ಅನ್ಸುತ್ತೆ. ಅದಕ್ಕೆ ರಾಜಕುಮಾರನನ್ನ ಯುವರತ್ನ ಮುಗಿದ ಮೇಲೆ ಕರೆದುಕೊಂಡು ಬಿಟ್ಟ. ಈಗ ಇದೇ ಸಂತೋಷ್ ಆನಂದ್ ರಾಮ್ ಗೆ ಅಭಿಮಾನಿಗಳು ಬಯೋಪಿಕ್ ಮಾಡಲು ಮನವಿ ಮಾಡಿದ್ದಾರೆ. ಹಾಗೇ ಅಪ್ಪು ಸರ್ ಅವರನ್ನ ಜೀವಂತವಾಗಿಡಲು ಪ್ರತಿವರ್ಷ ಹಾಡೊಂದನ್ನ ಸಿದ್ಧ ಮಾಡಲು ಮನವಿ ಮಾಡಿದ್ದಾರೆ.

ಸಂತೋಷ್ ಆನಂದ್ ರಾಮ್ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಬಗ್ಗೆ ತೆರೆಮೇಲೆ ತರಲು ನಾನು ನನ್ನ ಕೈಲಾದ ಪ್ರಯತ್ನ ಮಾಡ್ತೇನೆ ಎಂದಿದ್ದಾರೆ. ಅಭಿಮಾನಿಗಳು ಈ ರಿಪ್ಲೈ ನೋಡಿ ಖುಷಿ ಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *